` ಸುಧಿಂದ್ರ.. ಆರಕ.. ಜಾಗ್ರವ.. ಗುರು.. ಯಾರಿವರು ಭಜರಂಗೀ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಸುಧಿಂದ್ರ.. ಆರಕ.. ಜಾಗ್ರವ.. ಗುರು.. ಯಾರಿವರು ಭಜರಂಗೀ..?
Bhajarangi 2 Movie Image

ಭಜರಂಗಿ ಟ್ರೇಲರ್ ಹೊರಬಿದ್ದಿದೆ. ನೋಡಿದವರೆಲ್ಲ ವ್ಹಾವ್ ಎನ್ನುವಂತಿದೆ ಟ್ರೇಲರ್. ಶಿವಣ್ಣ, ಭಾವನಾ, ಶೃತಿ ಅಷ್ಟೇ ಅಲ್ಲ.. ಇಡೀ ಟ್ರೇಲರಿನಲ್ಲಿ ಗಮನ ಸೆಳೆಯುತ್ತಿರೋದು ಇನ್ನೂ ನಾಲ್ವರು.

ಜಾಗ್ರವ : ಆರಡಿ ಮೂರಿಂಚು ಎತ್ತರ. ತಲೆಯ ಮೇಲೊಂದು ಎತ್ತರದ ವಿಚಿತ್ರ ಕಿರೀಟ. ಆತ ಜಾಗ್ರವ. ಈ ಪಾತ್ರದಲ್ಲಿ ಮಿಂಚಿರೋದು ಪ್ರಸನ್ನ ಭಗೀನ.

ನನ್ನದು ಕಿರಾಕಿ ಸಾಮ್ರಾಜ್ಯದಲ್ಲಿ ಬರೋ ಪ್ರಮುಖ ವ್ಯಕ್ತಿಯ ಪಾತ್ರ. 8 ಕೆಜಿಯಷ್ಟು ತೂಕದ ವಸ್ತ್ರಾಭರಣ ಹೊತ್ತುಕೊಂಡು ನಟಿಸೋದು ಸುಲಭವೇನಾಗಿರಲಿಲ್ಲ. ಈ ಪಾತ್ರ ಸದಾ ನನ್ನ ನೆನಪಿನಲ್ಲಿ ಉಳಿಯಲಿದೆ ಎಂದಿದ್ದಾರೆ ಪ್ರಸನ್ನ.

ಗುರು : ಸಾತ್ವಿಕ ಋಷಿಯಂತೆ ಕಾಣುವ ಗುರು ಪಾತ್ರದಲ್ಲಿ ನಿಂತಿರೋದು ವಜ್ರಗಿರಿ. ಅವರಿಗಿನ್ನೂ 26 ವರ್ಷ ಎಂದರೆ ನಂಬಲೇಬೇಕು. ಚಿತ್ರದಲ್ಲಿ ಮಾತ್ರ ವೃದ್ಧ ಋಷಿಯ ವೇಷಧಾರಿ.

ನನಗೆ 26 ವರ್ಷ. ಆದರೆ ಚಿತ್ರದಲ್ಲಿ 50, 60 ಹಾಗೂ 110 ವರ್ಷದ ವೃದ್ಧನಾಗಿ ನಟಿಸಿದ್ದೇನೆ. ಒಳ್ಳೆಯದು ಮತ್ತು ಕೆಟ್ಟದ್ದೂ ಎರಡೂ ಗೊತ್ತಿರುವ ಪಾತ್ರ ನನ್ನದು. ಚಿತ್ರದ ಮೂರೂ ಶೇಡ್‍ಗಳಿಗೆ ನಾನೇ ಮೂರು ಮಾದರಿಯಲ್ಲಿ ಡಬ್ಬಿಂಗ್ ಮಾಡಿದ್ದೇನೆ ಎನ್ನುತ್ತಾರೆ ವಜ್ರಗಿರಿ.

ಸುಧಿಂದ್ರ : ಭಜರಂಗಿ ಲೋಕಿ ಎಂದೇ ಫೇಮಸ್ ಆಗಿರೋ ಸೌರವ್ ಲೋಕೇಶ್ ಇಲ್ಲಿ ಸುಧಿಂದ್ರ ಅನ್ನೋ ಪಾತ್ರ ಮಾಡಿದ್ದಾರೆ. ಸುಧಿಂದ್ರ ತನ್ನದೇ ಆದ ಸಾಮ್ರಾಜ್ಯದಲ್ಲಿ ಬದುಕುತ್ತಿರೋ ವಿಕ್ಷಿಪ್ತ ವ್ಯಕ್ತಿತ್ವದವನು. ಚಿತ್ರದ ಸ್ಕ್ರಿಪ್ಟ್ ಹಂತದಲ್ಲಿಯೇ ನನಗೆ ಈ ಪಾತ್ರ ಹಿಡಿಸಿತ್ತು. ಅದೇ ಪಾತ್ರ ಸಿಕ್ಕಿತು. ಇನ್ನೊಂದು ವಿಶೇಷವೆಂದರೆ ಭಜರಂಗಿಯಲ್ಲಿ ವಿಲನ್ ಆಗಿದ್ದರೂ, ಶಿವಣ್ಣ ಮತ್ತು ನಾನು ಎದುರಾಬದುರು ನಟಿಸಿರಲಿಲ್ಲ. ಈ ಚಿತ್ರದಲ್ಲಿ ನನಗೆ ಆ ಲಕ್ ಸಿಕ್ಕಿದೆ ಎಂದು ಖುಷಿಯಾಗಿದ್ದಾರೆ ಸುಧಿಂದ್ರ ಅಲಿಯಾಸ್ ಲೋಕಿ.

ಆರಕ : ಚೆಲುವರಾಜ್ ಅನ್ನೋ ಹೊಸ ಹುಡುಗ ನಟಿಸಿರೋ ಪಾತ್ರ ಆರಕ. ಚಿತ್ರದ ಪ್ರಮುಖ ವಿಲನ್. ಸಾಮಾನ್ಯವಾಗಿ ವಿಲನ್‍ಗಳಿಗೆ ನವರಸಗಳನ್ನೂ ಪ್ರಯೋಗಿಸುವ ಅವಕಾಶ ಸಿಕ್ಕಲ್ಲ. ನನಗಿಲ್ಲಿ ಆ ಚಾನ್ಸ್ ಸಿಕ್ಕಿದೆ. ಥ್ಯಾಂಕ್ಯೂ ಹರ್ಷ ಮಾಸ್ಟರ್ ಎನ್ನುತ್ತಿದ್ದಾರೆ ಚೆಲುವರಾಜ್.

ಹರ್ಷ ನಿರ್ದೇಶನದ ಸಿನಿಮಾ ಇದೇ ಅಕ್ಟೋಬರ್ 29ಕ್ಕೆ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆ ಕಾಣುತ್ತಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery