` ತಂತ್ರ.. ಮಂತ್ರ.. ಛೂಮಂತ್ರ.. ಬಂಭಂಬಂಭಂಬಬಮ್ ಭಜರಂಗಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ತಂತ್ರ.. ಮಂತ್ರ.. ಛೂಮಂತ್ರ.. ಬಂಭಂಬಂಭಂಬಬಮ್ ಭಜರಂಗಿ
Bhajarangi 2 Movie Image

ಅಕ್ಟೋಬರ್ 29ಕ್ಕೆ ರಿಲೀಸ್ ಆಗುತ್ತಿರೋ ಭಜರಂಗಿ 2 ಚಿತ್ರದ ಟ್ರೇಲರ್ ಬಂದಿದೆ. ಶಿವಣ್ಣ ಎಂಟ್ರಿ, ಮಾಂತ್ರಿಕರ ಅಟ್ಟಹಾಸ, ಭಾವನಾ, ಶ್ರುತಿಯವರ ಬೆರಗು ಹುಟ್ಟಿಸುವ ಲುಕ್ಕುಗಳು, ಲೋಕಿಯ ಭಯಂಕರ ವೇಷ.. ಒಂದಲ್ಲ..ಎರಡಲ್ಲ.. ಜೊತೆಗೆ ಇವೆಲ್ಲಕ್ಕೂ ಕಳಶವಿಟ್ಟಂತೆ ಇರುವ ಬ್ಯಾಕ್ ಗ್ರೌಂಡ್ ಮ್ಯೂಸಿಕ್.. ಒಂದಕ್ಕೊಂದು ಪೈಪೋಟಿಗೆ ಬಿದ್ದಂತಿರುವ ಟ್ರೇಲರ್‍ನಲ್ಲಿ ಗಮನ ಸೆಳೆಯುತ್ತಿರುವುದು ಚಿತ್ರದ ಮೇಕಿಂಗ್.

ಹರ್ಷ ನಿರ್ದೇಶನದಲ್ಲಿ ಬಂದಿರುವ ಭಜರಂಗಿ 2, ದೀಪಾವಳಿ ಹಬ್ಬದ ರಂಗೇರಿಸುವ ಸೂಚನೆ ನೀಡಿದೆ. ಜಯಣ್ಣ-ಭೋಗೇಂದ್ರ ನಿರ್ಮಾಣದ ಸಿನಿಮಾಗೆ ಸೆನ್ಸಾರ್‍ನವರು ಯು/ಎ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಒಟ್ಟಾರೆ 2 ಗಂಟೆ 35 ನಿಮಿಷ 13 ಸೆಕೆಂಡುಗಳ ಚಿತ್ರ ಭಜರಂಗಿ 2. ಅಕ್ಟೋಬರ್ 29ರಂದು 350ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ ಎಂದಿದ್ದಾರೆ ನಿರ್ಮಾಪಕ ಜಯಣ್ಣ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery