Print 
sreeleela, shubhakar rao,

User Rating: 0 / 5

Star inactiveStar inactiveStar inactiveStar inactiveStar inactive
 
ನಟಿ ಶ್ರೀಲೀಲಾ ನನ್ನ ಮಗಳಲ್ಲ : ಉದ್ಯಮಿ ಶುಭಾಕರ್ ರಾವ್
Shubhakar Rao, Sreeleela

ಕಿಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರತಿಭಾವಂತ ನಟಿ ಶ್ರೀಲೀಲಾ. ಕಿಸ್ ನಂತರ ಭರಾಟೆಯಲ್ಲೂ ಗೆದ್ದ ಶ್ರೀಲೀಲಾರ ಮೊದಲ ತೆಲುಗು ಸಿನಿಮಾ ಪೆಳ್ಳಿಸಂದಡಿ ರಿಲೀಸ್ ಆಗಿದೆ. ಒಳ್ಳೆಯ ರೆಸ್ಪಾನ್ಸ್ ಕೂಡಾ ಸಿಕ್ಕಿದೆ. ಇದೇ ವೇಳೆ ಶ್ರೀಲೀಲಾ ಅವರ ತಂದೆ ಎಂದು ಹೇಳಲಾಗಿರೋ ಉದ್ಯಮಿ ಶುಭಾಕರ್ ರಾವ್ ಸುರಪನೇನಿ ನಾನು ಶ್ರೀಲೀಲಾ ತಂದೆ ಅಲ್ಲ. ಆಕೆ ನನ್ನ ಮಗಳೂ ಅಲ್ಲ ಎಂದಿದ್ದಾರೆ.

ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ ಉದ್ಯಮಿ ಶುಭಾಕರ್ ರಾವ್ ಸುರಪನೇನಿ ಅವರನ್ನು ಮದುವೆಯಾಗಿದ್ದುದು ಸತ್ಯ. ಆದರೆ, ಅವರು ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದು, ಆ ಕೇಸ್ ಇನ್ನೂ ಕೋರ್ಟಿನಲ್ಲಿ ನಡೆಯುತ್ತಿದೆ. ಇತ್ಯರ್ಥವಾಗಿಲ್ಲ. ನಾವಿಬ್ಬರೂ ಸುಮಾರು 20 ವರ್ಷಗಳಿಂದ ಬೇರೆ ಇದ್ದೇವೆ. ವಿಚ್ಚೇಧನ ಪ್ರಕರಣ ಫ್ಯಾಮಿಲಿ ಕೋರ್ಟಿನಲ್ಲಿದೆ. ನಾವಿಬ್ಬರೂ ಬೇರೆಯಾದಾಗ ಸ್ವರ್ಣಲತಾ ಗರ್ಭಿಣಿಯೂ ಆಗಿರಲಿಲ್ಲ. ಇದೆಲ್ಲ ಆಸ್ತಿ ಪಡೆಯಲು ನಡೆಸುತ್ತಿರುವ ಹುನ್ನಾರ ಎನ್ನುವುದು ಉದ್ಯಮಿ ಶುಭಾಕರ್ ರಾವ್ ಸುರಪನೇನಿ ಮಾತು.

ಈ ಬಗ್ಗೆ ಉದ್ಯಮಿ ಶುಭಾಕರ್ ರಾವ್ ಸುರಪನೇನಿ ಶ್ರೀಲೀಲಾ ಮತ್ತು ಸ್ವರ್ಣಲತಾ ಇಬ್ಬರಿಗೂ ನೋಟಿಸ್ ನೀಡಿದ್ದಾರಂತೆ. ತಮ್ಮ ಹೆಸರು ಬಳಸಿಕೊಳ್ಳದಂತೆ ತಿಳಿಸಿದ್ದಾರಂತೆ. ಸದ್ಯಕ್ಕೆ ಶ್ರೀಲೀಲಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.