ವಿ.ರವಿಚಂದ್ರನ್ ಅಭಿನಯದ ಜಟ್ಟ ಗುರುರಾಜ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಕನ್ನಡಿಗ. ರವಿಚಂದ್ರನ್ ಅವರಿಗೂ ಇಂತಹ ಚಿತ್ರ ಮೊದಲ ಅನುಭವವೇ. ಈಗ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. ರವಿಚಂದ್ರನ್ ಪೋರ್ಷನ್ ಡಬ್ಬಿಂಗ್ ಮುಗಿದಿದೆ.
ಚಿತ್ರ ಈಗಾಗಲೇ ಸೆನ್ಸಾರ್ ಆಗಿತ್ತು. ಆದರೆ, ಚಿತ್ರಕ್ಕೆ ನಂತರ ಮತ್ತೆರಡು ಹಾಡು ಸೇರಿಸಿ, ರವಿಚಂದ್ರನ್ ಅವರಿಂದಲೇ ಡಬ್ಬಿಂಗ್ ಮಾಡಿಸುವ ನಿರ್ಧಾರಕ್ಕೆ ಬಂದ ಮೇಲೆ ಮತ್ತೆ ಶೂಟಿಂಗ್, ಡಬ್ಬಿಂಗ್ ಮಾಡಲಾಗಿತ್ತು. ರವಿಚಂದ್ರನ್ ಅವರು ಈ ಚಿತ್ರದಲ್ಲಿ ಗುಣಭದ್ರ ಮತ್ತು ಸಮಂತ ಭದ್ರ ಎಂಬ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ರಾಕ್‍ಲೈನ್ ವೆಂಕಟೇಶ್, ಭವಾನಿ ಪ್ರಕಾಶ್ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದೆ. ಚಿತ್ರವನ್ನು ರಾಜ್ಯೋತ್ಸವಕ್ಕೇ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡುತ್ತಿದೆ.