ನಿಖಿಲ್ ಕುಮಾರಸ್ವಾಮಿ ರೈಡರ್ ಆಗಿ ಬರುತ್ತಿದ್ದಾರೆ. ಆ ರೈಡರ್ ಚಿತ್ರ ರಿಲೀಸ್ ಆಗೋಕೆ ರೆಡಿಯಾಗಿರುವಾಗಲೇ ನಿಖಿಲ್ ಅವರ ಎದೆ ಢವಢವ ಹೊಡೆದುಕೊಳ್ಳೋಕೆ ಶುರುವಾಗಿದೆ. ಅದ್ಧೂರಿ ಕಾರ್ಯಕ್ರಮದ ಮೂಲಕ ಢವಢವ ಹಾಡು ರಿಲೀಸ್ ಮಾಡಿರೋ ರೈಡರ್ ಟೀಂ, ಈಗ ಸಿನಿಮಾ ರಿಲೀಸ್‍ಗೆ ಪೂರ್ವ ತಯಾರಿ ಆರಂಭಿಸಿದೆ. ಅರ್ಜುನ್ ಜನ್ಯ ಮ್ಯೂಸಿಕ್ಕಿನಲ್ಲಿ ಬಂದಿರೋ ಢವಢವ ಹಾಡು ಸೂಪರ್ ಹಿಟ್. ಚೇತನ್ ಅವರ ಸಾಹಿತ್ಯಕ್ಕೆ ಅರ್ಮಾನ್ ಮಲಿಕ್ ವಾಯ್ಸು ಪ್ಲಸ್ ಆಗಿದೆ.
ಸಿನಿಮಾದಲ್ಲಿ ನಿಖಿಲ್ ಕುಮಾರಸ್ವಾಮಿ ಈ ಹಾಡಿರೋದು ಕಾಶ್ಮೀರ ಪರದೇಸಿ ಮೇಲೆ. ಹಾಡಿನಲ್ಲಿ ಎಲ್ಲವೂ.. ಎಲ್ಲರೂ.. ಮುದ್ದು ಮುದ್ದು. ವಿಜಯ್ ಕುಮಾರ್ ಕೊಂಡ ನಿರ್ದೇಶನದ ಚಿತ್ರಕ್ಕೆ ಚಂದ್ರು ಮನೋಹರನ್ ಮತ್ತು ಸುನಿಲ್ ಗೌಡ ನಿರ್ಮಾಪಕರು.