ಆಯುಧಪೂಜೆಯ ದಿನವೇ ರಿಲೀಸ್ ಆಗಬೇಕಿದ್ದ ಕೋಟಿಗೊಬ್ಬ 3 ಚಿತ್ರದ ಬಿಡುಗಡೆ ಒಂದು ದಿನ ಮುಂದಕ್ಕೆ ಹೋಗಿದೆ. ಚಿತ್ರ ಇಂದು ಬಿಡುಗಡೆಯಾಗುತ್ತಿಲ್ಲ. ಬೆಳಗ್ಗೆಯಿಂದಲೇ ಶುರುವಾದ ಗೊಂದಲಕ್ಕೆ ನಿರ್ಮಾಪಕ ಸೂರಪ್ಪ ಬಾಬು ತೆರೆ ಎಳೆದಿದ್ದಾರೆ. ಅತ್ತ ಕಿಚ್ಚ ಸುದೀಪ್ ಕೂಡಾ ಟ್ವೀಟ್ ಮೂಲಕ ಅಭಿಮಾನಿಗಳಿಗೆ ಶಾಂತಿಯಿಂದಿರಲು ಮನವಿ ಮಾಡಿದ್ದಾರೆ.
ಕೆಲವರ ಬೇಜವಾಬ್ದಾರಿತನದಿಂದಾಗಿ ಕೋಟಿಗೊಬ್ಬ- 3 ಚಿತ್ರ ರಿಲೀಸ್ ಆಗಲಿಲ್ಲ. ಚಿತ್ರಮಂದಿರಗಳ ಮಾಲೀಕರ ತಪ್ಪು ಏನೂ ಇಲ್ಲ. ದಯವಿಟ್ಟು ಶಾಂತಿಯಿಂದಿರಿ. ಚಿತ್ರಮಂದಿರದವರ ಜೊತೆ ಗಲಾಟೆ ಮಾಡಬೇಡಿ ಎಂದು ಸುದೀಪ್ ಮನವಿ ಮಾಡಿದ್ದಾರೆ.
ಕೆಲವರ ಷಡ್ಯಂತ್ರದಿಂದಾಗಿ ಚಿತ್ರ ಬಿಡುಗಡೆ ಸಾಧ್ಯವಾಗಲಿಲ್ಲ. ಈಗ ಎಲ್ಲವನ್ನೂ ಬಗೆಹರಿಸಿಕೊಳ್ಳುತ್ತಿದ್ದೇವೆ. ಸಂಜೆಯೊಳಗೆ ವಿವಾದ ಇತ್ಯರ್ಥವಾಗಲಿದ್ದು, ನಾಳೆ ಬೆಳಗ್ಗೆಯೇ ಶೋ ಶುರುವಾಗಲಿದೆ. ಸುದೀಪ್ ಅಭಿಮಾನಿಗಳು ಹಾಗೂ ಪ್ರೇಕ್ಷಕರಲ್ಲಿ ಆಗಿರುವ ಗೊಂದಲಕ್ಕೆ ಕ್ಷಮೆ ಕೇಳುತ್ತಿದ್ದೇನೆ. ದಯವಿಟ್ಟು ಸಹಕರಿಸಿ ಎಂದು ಕೇಳಿಕೊಂಡಿದ್ದಾರೆ ನಿರ್ಮಾಪಕ ಸೂರಪ್ಪ ಬಾಬು.