ಸದಾ ಹೊಸ ಕನಸುಗಳನ್ನು ಬೆನ್ನತ್ತಿ ಹೋಗುವ ಕಿಚ್ಚ ಸುದೀಪ್ ಈಗ ಮತ್ತೊಂದು ಹೊಸ ಚಾಲೆಂಜ್`ನ್ನು ತಮಗೆ ತಾವೇ ಹಾಕಿಕೊಂಡಿದ್ದಾರೆ. ಕೋಟಿಗೊಬ್ಬ 3 ರಿಲೀಸ್ ಆಗುತ್ತಿರುವ ನಡುವೆಯೇ ತಮ್ಮ ಹೊಸ ಕನಸಿನ ಕಥೆ ಹೇಳಿದ್ದಾರೆ. ಅದು ಸಲ್ಮಾನ್ ಖಾನ್ ಚಿತ್ರವನ್ನು ನಿರ್ದೇಶಿಸುವ ಸೆನ್ಸೇಷನಲ್ ಸುದ್ದಿ.
ಹಿಂದಿಯಲ್ಲಿ ಸಲ್ಮಾನ್ ಖಾನ್‍ಗೆ ನಿರ್ದೇಶನ ಮಾಡುವ ಸಲುವಾಗಿಯೇ ಕಥೆ ರೆಡಿ ಮಾಡಿದ್ದಾರಂತೆ ಕಿಚ್ಚ. ಕಥೆ ಹೇಳಿದ್ದೇನೆ. ಫ್ರೆಂಡ್ ಅನ್ನೋ ಕಾರಣಕ್ಕೆ ಸಲ್ಮಾನ್ ಒಪ್ಪಿಕೊಳ್ಳಲ್ಲ. ಅವರಿಗೆ ಕಥೆ ಇಷ್ಟವಾದರೆ ಓಕೆ ಎನ್ನುತ್ತಾರೆ. ಒಪ್ಪಿಕೊಳ್ಳುತ್ತಾರೆ ಅನ್ನೋ ಭರವಸೆ ಇದೆ ಎಂದಿದ್ದಾರೆ ಸುದೀಪ್.
ಸದ್ಯದ ಪ್ಲಾನ್ ಪ್ರಕಾರ ಸಲ್ಮಾನ್ ಒಪ್ಪಿದರೆ ಹಿಂದಿಯಲ್ಲಿ ಸಲ್ಮಾನ್ ಹಾಗೂ ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಸ್ವತಃ ಸುದೀಪ್ ನಟಿಸುವ ಸಾಧ್ಯತೆ ಇದೆ. ಸದ್ಯಕ್ಕಂತೂ ಸುದೀಪ್ ಎದುರು ನೋಡುತ್ತಿರೋದು ಕೋಟಿಗೊಬ್ಬ 3 ರಿಸಲ್ಟ್.