ಫೋಬ್ರ್ಸ್. ಅಂತಾರಾಷ್ಟ್ರೀಯ ಮಟ್ಟದ ಮ್ಯಾಗಜಿನ್. ಆ ಪತ್ರಿಕೆಯಲ್ಲಿ ಹೆಸರು ಬಂದರೆ ಸಾಕು ಎಂದು ಹಪಹಪಿಸುವವರ ಸಂಖ್ಯೆ ಅದೆಷ್ಟೋ. ಆಸೆ ಪಟ್ಟವರಿಗೆಲ್ಲ ಫೋಬ್ರ್ಸ್ ಪತ್ರಿಕೆಯಲ್ಲಿ ಜಾಗ ಸಿಗಲ್ಲ. ಹೀಗಾಗಿಯೇ ಫೋಬ್ರ್ಸ್ ಪಟ್ಟಿ ಮತ್ತು ವರದಿಗಳಿಗೆ ವಿಶ್ವ ಮಾನ್ಯತೆ ಇದೆ. ಆ ಪಟ್ಟಿಯಲ್ಲೀಗ ರಾಕಿಂಗ್ ಸ್ಟಾರ್ ಯಶ್ ಸ್ಥಾನ ಗಿಟ್ಟಿಸಿದ್ದಾರೆ.
ಫೋಬ್ರ್ಸ್ ಪತ್ರಿಕೆ ದ.ಭಾರತ ಸಿನಿ ಸ್ಟಾರ್‍ಗಳ ಪಟ್ಟಿ ಪ್ರಕಟಿಸಿದ್ದು, ಆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಕನ್ನಡ ನಟ ಯಶ್. ತಮಿಳಿನಿಂದ ನಯನತಾರಾ, ಮಲಯಾಳಂನಿಂದ ದುಲ್ಕರ್ ಸಲ್ಮಾನ್, ತೆಲುಗಿನಿಂದ ವಿಜಯ್ ದೇವರಕೊಂಡ ಸ್ಥಾನ ಗಿಟ್ಟಿಸಿದ್ದಾರೆ. ಅಫ್‍ಕೋರ್ಸ್.. ಇಷ್ಟೆಲ್ಲ ಸಾಧನೆಗೆ ಮೂಲ ಕಾರಣ ಕೆಜಿಎಫ್ ಅನ್ನೋದು ಸುಳ್ಳೇನಲ್ಲ.
ಫೋಬ್ರ್ಸ್ ಈ ದಕ್ಷಿಣ ಭಾರತ ಸ್ಟಾರ್‍ಗಳ ಬಗ್ಗೆ ವರದಿ ಮಾಡೋಕೆ ಕಾರಣವಾಗಿದ್ದು ಮಾತ್ರ ಹಿಂದಿ ಚಿತ್ರರಂಗವೇ. ಲಾಕ್ ಡೌನ್ ಟೈಂನಲ್ಲಿ ಮುಂಬೈ ಕಂಪ್ಲೀಟ್ ಲಾಕ್ ಆಗಿತ್ತು. ಇದರ ನಡುವೆ ರಿಲೀಸ್ ಆಗಿದ್ದು.. ಬಾಕ್ಸಾಫೀಸ್ ಸಾಧನೆ ಬರೆದಿದ್ದು ಹಾಗೂ ಒಟಿಟಿಯಲ್ಲೂ ಸದ್ದು ಮಾಡಿದ್ದು ದಕ್ಷಿಣ ಭಾರತದ ಚಿತ್ರಗಳು. ಹೀಗಾಗಿ ಫೋಬ್ರ್ಸ್ ಲಿಸ್ಟ್‍ನಲ್ಲಿ ಯಶ್ ಸ್ಥಾನ ಗಿಟ್ಟಿಸಿದ್ದಾರೆ.