ಇತ್ತೀಚೆಗಷ್ಟೇ 50ನೇ ಚಿತ್ರ ಪೂರೈಸಿರುವ ವಿಜಯ್ ರಾಘವೇಂದ್ರ ಹೊಸ ಹೊಸ ಪ್ರಯೋಗಗಳಿಗೆ ಓಪನ್ ಆಗುತ್ತಿದ್ದಾರೆ. ಸೀತಾರಾಮ್ ಬಿನೋಯ್ ಮೂಲಕ ಒಳ್ಳೆಯ ಪ್ರತಿಕ್ರಿಯೆ ಪಡೆದ ವಿಜಯ್, ಈಗ ಗ್ರೇ ಗೇಮ್ಸ್ ಅನ್ನೋ ಹೊಸ ಸಿನಿಮಾಗೆ ಯೆಸ್ ಎಂದಿದ್ದಾರೆ.
ಗ್ರೇ ಗೇಮ್ಸ್‍ನಲ್ಲಿ ವಿಜಯ್ ರಾಘವೇಂದ್ರ ಎದುರು ಭಾವನಾ ರಾವ್ ಹೀರೋಯಿನ್. ಮೊಬೈಲ್ ಗೇಮ್ ಗೀಳು ಮಕ್ಕಳ ಬದುಕನ್ನು ಹೇಗೆಲ್ಲ ಡ್ಯಾಮೇಜ್ ಮಾಡುತ್ತೆ ಅನ್ನೋದು ಚಿತ್ರದ ಕಥೆ. ಗಂಗಾಧರ ಸಾಲಿಮಠ ನಿರ್ದೇಶನದ ಚಿತ್ರವಿದು.
ವಿಜಯ್ ರಾಘವೇಂದ್ರ ಮನೋವೈದ್ಯರಾಗಿದ್ದರೆ, ಭಾವನಾ ರಾವ್ ಸೈಬರ್ ಕ್ರೈಂ ಆಫೀಸರ್. ಅಪರ್ಣ ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದು, ವಿಜಯ್ ರಾಘವೇಂದ್ರ ಅಕ್ಕನ ಮಗ ಜೈ ಕೂಡಾ ನಟಿಸುತ್ತಿದ್ದಾರೆ.