ಕೋಟಿಗೊಬ್ಬ 3 ಟ್ರೇಲರ್ ನೋಡಿದವರಿಗೆ ಒಂದು ಅನುಮಾನವಂತೂ ಕಾಡುತ್ತೆ. ಇಲ್ಲಿ ನಿಜಕ್ಕೂ ಸುದೀಪ್ ಡಬಲ್ ರೋಲ್ ಮಾಡಿದ್ದಾರಾ? ಅಥವಾ ಕೋಟಿಗೊಬ್ಬ 2ನಲ್ಲಿ ಆಗುವಂತೆ ಶಿವ ಮತ್ತು ಸತ್ಯ ಇಬ್ಬರೂ ಒಬ್ಬರೇನಾ? ಅಲ್ಲಿ ರವಿಶಂಕರ್ ಪಾತ್ರ ಬಲಿ ಕಾ ಬಕ್ರಾ ಆದಂತೆ ಇಲ್ಲಿ ಇನ್ನೊಬ್ಬ ವಿಲನ್ ಆಗ್ತಾರಾ? ಅಷ್ಟು ಕುತೂಹಲ ಹುಟ್ಟಿಸಿರೋದು ಕೋಟಿಗೊಬ್ಬ 3 ಟ್ರೇಲರ್. ಕ್ರೆಡಿಟ್ ಸಲ್ಲಬೇಕಾದ್ದು ನಿರ್ದೇಶಕ ಶಿವಕಾರ್ತಿಕ್ ಅವರಿಗೆ.
ನಾನು ಮೊದಲು ಒಂದು ರೊಮ್ಯಾಂಟಿಕ್ ಆ್ಯಕ್ಷನ್ ಕಥೆ ರೆಡಿಮಾಡಿಕೊಂಡು ಹೋದೆ. ಸೂರಪ್ಪ ಬಾಬು ಸರ್‍ಗೆ ಇಷ್ಟವಾಯ್ತು. ಸುದೀಪ್ ಸರ್‍ಗೂ ಇಷ್ಟವಾಯ್ತು. ಆದರೆ, ಆ ಕಥೆಯಲ್ಲಿ ರನ್ನ ಮತ್ತು ಮಾಣಿಕ್ಯ ಚಿತ್ರಗಳ ಶೇಡ್ ಕಾಣಿಸುತ್ತಿತ್ತು. ಹೀಗಾಗಿ ಸುದೀಪ್ ಸರ್ ಒಮ್ಮೆ ಕೋಟಿಗೊಬ್ಬ 2 ನೋಡುವಂತೆ ಹೇಳಿದರು. ಅದನ್ನು ನೋಡುವಾಗ ಹೊಳೆದ ಲೈನ್ ಇಷ್ಟು. ರವಿಶಂಕರ್ ಪಾತ್ರ ಡಬಲ್ ರೋಲ್ ಮಾಡಿದರೆ ಹೇಗೆ ಅನ್ನೋದು. ಅದನ್ನೇ ಸ್ವಲ್ಪ ಡೆವಲಪ್ ಮಾಡಿ ಸುದೀಪ್ ಸರ್‍ಗೆ ಹೇಳಿದಾಗ ಅವರೂ ಥ್ರಿಲ್ಲಾದರು. ಚಿತ್ರಕಥೆ ರೆಡಿ ಮಾಡೋಕೆ ಹೇಳಿದರು ಎನ್ನುತ್ತಾರೆ ಶಿವ ಕಾರ್ತಿಕ್.
ಕೋಟಿಗೊಬ್ಬ 3 ಶಿವಕಾರ್ತಿಕ್ ಅವರಿಗೆ ಫಸ್ಟ್ ಸಿನಿಮಾ. ಮೊದಲ ಸಿನಿಮಾದಲ್ಲೇ ಸುದೀಪ್ ಹೀರೋ. ಪ್ಯಾನ್ ಇಂಡಿಯಾ ಲೆವೆಲ್ ಸಿನಿಮಾ. ಜೊತೆಗೆ ಮೊದಲ ಸಿನಿಮಾ ರಿಲೀಸ್ ಆಗುತ್ತಿರೋದು ನಾಡಹಬ್ಬದ ದಿನ. ಎಲ್ಲವೂ ನನಗೆ ಸ್ಪೆಷಲ್ ಎಂದು ಥ್ರಿಲ್ಲಾಗಿದ್ದಾರೆ ಶಿವಕಾರ್ತಿಕ್.