2 ನಿಮಿಷ 42 ಸೆಕೆಂಡುಗಳ ಟ್ರೇಲರ್. ಕಿಚ್ಚ ಆರಂಭದಲ್ಲಿ ಕಾಣಿಸಿಕೊಳ್ಳೋದೇ ಇಲ್ಲ. ಐ ಆ್ಯಮ್ ದ ಮರ್ಚೆಂಟ್ ಆಫ್ ಡೆತ್ ಎಂದು ನವಾಬ್ ಶಾ ಹೇಳೋ ಮೂಲಕ ಶುರುವಾಗೋ ಟ್ರೇಲರ್‍ನಲ್ಲಿ ಮೆಡಿಕಲ್ ಮಾಫಿಯಾದ ಕಥೆ ಇಣುಕುತ್ತೆ. ಆಮೇಲೆ ಸುದೀಪ್ ಎಂಟ್ರಿ ಲೈವ್ಲಿಯಾಗಿಯೇ ಆಗುತ್ತೆ. ಹಾಗಂತ ಇದು ಕಾಮಿಡಿ ಸಿನಿಮಾ ಅಲ್ಲ. ಸಸ್ಪೆನ್ಸ್ ಥ್ರಿಲ್ಲರ್.
ನಾಯಕಿ ಮಡೋನ್ನಾ ಸೆಬಾಸ್ಟಿಯನ್ ಮತ್ತು ಶ್ರದ್ಧಾ ದಾಸ್ ಪಾತ್ರಗಳಲ್ಲಿ ಒಂದಿಷ್ಟು ನಿಗೂಢತೆಯೂ ಇದೆ. ರವಿಶಂಕರ್ ಪಾತ್ರ ಕಾಮಿಡಿಯೋ.. ಏನು ಅನ್ನೋದು ಗೊತ್ತಾಗಲ್ಲ.
ಸತ್ಯ ಮತ್ತು ಶಿವ ಪಾತ್ರಗಳ ಗೊಂದಲವನ್ನು ಇಲ್ಲೂ ಮುಂದುವರೆಸಿದ್ದಾರೆ ಡೈರೆಕ್ಟರ್ ಶಿವ ಕಾರ್ತಿಕ್. ಇಲ್ಲಿ ಪೊಲೀಸ್ ಆಗಿರೋದು ಅಫ್ತಾಬ್ ಶಿವದಾಸನಿ.
ಚಿನ್ನಾ.. ಓವರ್ ಆಗಿ ಮಾತನಾಡಬಾರದು. ಓವರ್ ಆಗಿ ಮಾತನಾಡೋರ ಮಾತನ್ನ ಕೇಳಿಸಿಕೊಳ್ಳೋಕೂ ಹೋಗಬಾರದು. ನೀನು ಮಾತಾಡ್ತಾ ಇರು, ನಾನು ತುಟಿ ಹೊಲಿದುಕೊಂಡಿರ್ತೇನೆ ಅನ್ನೋ ಡೈಲಾಗ್ ಸಿನಿಮಾಗಷ್ಟೇ ಅಲ್ಲ, ಲೈಫಿಗೂ ಅಪ್ಲೈ ಆಗುತ್ತೆ. ಸೂರಪ್ಪ ಬಾಬು ಹಣವನ್ನು ನೀರಿನಂತೆ ಸುರಿದಿದ್ದಾರೆ ಅನ್ನೋದು ಟ್ರೇಲರಿನಲ್ಲಿ ಗೊತ್ತಾಗುತ್ತೆ.