ಅದ್ಧೂರಿ ನಂತರ ಧ್ರುವ ಸರ್ಜಾ ಮತ್ತು ಎ.ಪಿ.ಅರ್ಜುನ್ ಮತ್ತೆ ಜೊತೆಯಾಗಿರುವ ಚಿತ್ರ ಮಾರ್ಟಿನ್. ಧ್ರುವ ಸರ್ಜಾರನ್ನು ಬೆಳ್ಳಿತೆರೆಗೆ ಪರಿಚಯಿಸಿದ ನಿರ್ದೇಶಕ ಅರ್ಜುನ್, ಮಾರ್ಟಿನ್ ನಂತರ ಮತ್ತೊಮ್ಮೆ ಧ್ರುವ ಸರ್ಜಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಧ್ರುವ ಸರ್ಜಾ ಹುಟ್ಟುಹಬ್ಬದ ದಿನ ಮಾರ್ಟಿನ್ ಚಿತ್ರದ ಪೋಸ್ಟರ್ ಹೊರಬಿದ್ದಿದೆ. ಧ್ರುವ ಸರ್ಜಾ ಕೈಗೆ ಬೇಡಿ ಹಾಕಿರುವ ಲುಕ್ ಸಂಚಲನ ಸೃಷ್ಟಿಸಿದೆ. ಮಾರ್ಟಿನ್ ಚಿತ್ರ ಮುಗಿಸಿದ ಕೂಡಲೇ ಅರ್ಜುನ್, ಧ್ರುವ ಜೊತೆ ಇನ್ನೊಂದು ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಮಾರ್ಟಿನ್ ಚಿತ್ರಕ್ಕೆ ಉದಯ್ ಮೆಹತಾ ನಿರ್ಮಾಪಕರಾದರೆ, ಹೊಸ ಚಿತ್ರಕ್ಕೆ ಸ್ವತಃ ಅರ್ಜುನ್ ಅವರೇ ಪ್ರೊಡ್ಯೂಸರ್.