ನೆನಪಿರಲಿ ಪ್ರೇಮ್ ಅವರ ಮೈಲಿಗಲ್ಲು ಸಿನಿಮಾ ಪ್ರೇಮಂ ಪೂಜ್ಯಂ. ಇದು ಅವರ 25ನೇ ಸಿನಿಮಾ. ಪ್ರೇಮ್ ಲವ್ ಸ್ಟೋರಿ ಮೂಲಕವೇ ಪ್ರೇಮಂ ಪೂಜ್ಯಂ ಮ್ಯಾಜಿಕ್ ಮಾಡಲು ರೆಡಿಯಾಗಿದ್ದಾರೆ. ವೈದ್ಯರೇ ಸೇರಿ ನಿರ್ಮಿಸಿ, ನಿರ್ದೇಶಿಸಿರುವ ಚಿತ್ರದಲ್ಲಿರೋದು ಡಾಕ್ಟರ್‍ಗಳ ಲವ್ ಸ್ಟೋರಿಯಂತೆ. ಚಿತ್ರ ಅಕ್ಟೋಬರ್ ಕೊನೆಯ ವಾರ ರಿಲೀಸ್ ಆಗುತ್ತಿದೆ. ಅದೂ ಭಜರಂಗಿ 2 ಚಿತ್ರದ ಎದುರು. ಚಿತ್ರದ ಪ್ರಚಾರವೂ ಜೋರಾಗಿದೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರೇಮಂ ಪೂಜ್ಯಂ ಪೋಸ್ಟರ್‍ಗಳು ರಾರಾಜಿಸುತ್ತಿವೆ. ಕೆಡಂಬಾದಿ ಕ್ರಿಯೇಷನ್ಸ್‍ನವರು ಬಸ್ಸು, ಆಟೋ, ಕ್ಯಾಬ್ಸ್.. ಎಲ್ಲವುಗಳ ಮೇಲೂ ಪ್ರೇಮಂ ಪೂಜ್ಯಂ ಪೋಸ್ಟರ್ ರಾರಾಜಿಸುವಂತೆ ಮಾಡಿದ್ದಾರೆ.
ಪ್ರೇಮ್ ಹೀರೋ ಆಗಿರೋ ಚಿತ್ರದಲ್ಲಿ ಬೃಂದಾ ಆಚಾರ್ಯ ನಾಯಕಿ. ಡಾ. ಬಿ.ಎಸ್.ರಾಘವೇಂದ್ರ ಅವರ ನಿರ್ದೇಶನದ ಪ್ರೇಮಂ ಪೂಜ್ಯಂ, ಹಬ್ಬವನ್ನೇ ಶುರು ಮಾಡಿದೆ.