ಇದೇ ವಾರ ರಿಲೀಸ್ ಆಗುತ್ತಿರುವ ನಿನ್ನ ಸನಿಹಕೆ ಚಿತ್ರದ ಮೊದಲ ಟಿಕೆಟ್‍ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖರೀದಿಸಿದ್ದಾರೆ. ಡಾ.ರಾಜ್ ಮೊಮ್ಮಗಳು ಮೊದಲ ಬಾರಿಗೆ ನಾಯಕಿಯಾಗಿ ಎಂಟ್ರಿ ಕೊಡುತ್ತಿರುವ ಸಿನಿಮಾ ನಿನ್ನ ಸನಿಹಕೆ. ದೊಡ್ಮನೆ ಹುಡುಗಿ ನಾಯಕಿಯಾಗುತ್ತಿರುವುದು ಇದೇ ಮೊದಲು. ಹೀಗಾಗಿ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳೂ ಇವೆ. ಚಿತ್ರದ ಪ್ರೀಮಿಯರ್ ಶೋ ಗುರುವಾರ ಸಂಜೆ ಇದೆ. ಈ ಶೋಗೆ ಸಿಎಂ ಬೊಮ್ಮಾಯಿ ಮತ್ತು ಅವರ ಕುಟುಂಬವನ್ನು ಆಹ್ವಾನಿಸಿದೆ ನಿನ್ನ ಸನಿಹಕೆ ತಂಡ.
ಚಿತ್ರದ ಹೀರೋ ಕಂ ಡೈರೆಕ್ಟರ್ ಸೂರಜ್ ಗೌಡ ಮತ್ತು ಧನ್ಯಾ ರಾಮ್‍ಕುಮಾರ್ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಪ್ರೀಮಿಯರ್ ಶೋಗೆ ಆಹ್ವಾನಿಸಿದ್ದಾರೆ. ನಿರ್ಮಾಪಕರಾದ ಅಕ್ಷಯ್ ರಾಜಶೇಖರ್ ಮತ್ತು ರಂಗನಾಥ್ ಕೂಡ್ಲಗಿ ಕೂಡಾ ಸಿಎಂರನ್ನು ಆಹ್ವಾನಿಸಿದರು.