ನೀನಾಸಂ ಸತೀಶ್ ಅಭಿನಯದ ಮ್ಯಾಟ್ನಿ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸುತ್ತಿರೋದು ರಚಿತಾ ರಾಮ್. ಅಯೋಗ್ಯ ಸಕ್ಸಸ್ ನಂತರ ಮತ್ತೊಮ್ಮೆ ಒಂದಾಗಿರೋ ಜೋಡಿ. ಚಿತ್ರ ಶುರುವಾದಾಗಲೇ ಇನ್ನೊಬ್ಬ ಹೀರೋಯಿನ್ ಬರುತ್ತಾರೆ ಎಂದಿದ್ದ ನಿರ್ದೇಶಕ ಮನೋಹರ್ ಕಾಂಪಳ್ಳಿ ಚಿತ್ರಕ್ಕೆ ಕರೆತಂದಿರೋದು ಬ್ರಹ್ಮಚಾರಿ ಸುಂದರಿ ಆದಿತಿ ಪ್ರಭುದೇವ ಅವರನ್ನ.
ರಚಿತಾ ಮತ್ತು ಆದಿತಿ ಇಬ್ಬರಿಗೂ ಇದು ಸತೀಶ್ ಜೊತೆ 2ನೇ ಸಿನಿಮಾ. ಮೊದಲ ಚಿತ್ರಗಳು ಸಕ್ಸಸ್ ಆಗಿವೆ. ಹೀಗಾಗಿ ಮೂರೂ ಜನ ಒಟ್ಟಿಗೇ ನಟಿಸುತ್ತಿರೋ ಚಿತ್ರವೂ ಯಶಸ್ವಿಯಾಗಲಿದೆ ಅನ್ನೋದು ಚಿತ್ರತಂಡದ ನಂಬಿಕೆ.
ಚಿತ್ರದಲ್ಲಿ ಆದಿತಿ ಮೆಡಿಕಲ್ ಸ್ಟೂಡೆಂಟ್ ಆಗಿ ನಟಿಸುತ್ತಿದ್ದಾರಂತೆ. ಚೈತ್ರಾ ಅನ್ನೋದು ಅವರ ಪಾತ್ರದ ಹೆಸರು. ಪಾರ್ವತಿ ಎಂಬುವವರು ನಿರ್ಮಾಣ ಮಾಡುತ್ತಿರೋ ಮ್ಯಾಟ್ನಿ ಚಿತ್ರದಲ್ಲಿ ಡಾರ್ಕ್ ಕಾಮಿಡಿ ಕಥೆಯಿದ್ದು, ಲವ್ ಮತ್ತು ಥ್ರಿಲ್ಲರ್ ಅಂಶಗಳೂ ಚಿತ್ರದಲ್ಲಿವೆಯಂತೆ.