ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದ್ದಂತೆಯೇ, ಚಿತ್ರದ ಪ್ರಮೋಷನ್ ಕೂಡಾ ಜೋರಾಗುತ್ತಿದೆ. ಅಕ್ಟೋಬರ್ 7ರಂದು ಸಂಜೆ 5 ಗಂಟೆಗೆ ಕೋಟಿಗೊಬ್ಬ 3 ಚಿತ್ರದ ಟ್ರೇಲರ್ ರಿಲೀಸ್ ಆಗುತ್ತಿದೆ. ಇದೂವರೆಗೆ ಚಿತ್ರದ 2 ಟೀಸರ್ ಹೊರಬಿದ್ದಿವೆ. ಅಕ್ಟೋಬರ್ 10ರಂದ ಬೆಂಗಳೂರಿನಲ್ಲಿಯೇ ಚಿತ್ರದ ಪ್ರಿ ರಿಲೀಸ್ ಈವೆಂಟ್ ನಡೆಯಲಿದೆ.
ಶಿವಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ 3 ಚಿತ್ರದಲ್ಲಿ ಸುದೀಪ್ ಹೀರೋ ಆದರೆ, ಮಡೋನ್ನಾ ಸೆಬಾಸ್ಟಿಯನ್ ನಾಯಕಿ. ರವಿಶಂಕರ್, ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸನಿ, ಡ್ಯಾನಿಷ್ ಅಖ್ತರ್ ನಟಿಸಿರುವ ಚಿತ್ರವಿದು. ಒಂದು ಹಾಡಿನಲ್ಲಿ ಚುಟು ಚುಟು ಅಶಿಕಾ ರಂಗನಾಥ್ ಪಟಾಕಿ ಸಿಡಿಸಿದ್ದರೆ, ಇನ್ನೊಂದು ಐಟಂ ಸಾಂಗ್‍ನಲ್ಲಿ ಸನ್ನಿ ಲಿಯೋನ್ ಸೊಂಟ ಬಳುಕಿಸಿದ್ದಾರೆ. ಮಂಗಳವಾರ ಕೋಟಿಗೊಬ್ಬ 3 ಸೆನ್ಸಾರ್ ಆಗಲಿದೆ ಎಂದು ತಿಳಿಸಿದ್ದಾರೆ ನಿರ್ಮಾಪಕ ಸೂರಪ್ಪ ಬಾಬು.