` ವಿಜಯಲಕ್ಷ್ಮಿ ಖಾತೆಗೆ ಹರಿದು ಬಂದ ಹಣ ಎಷ್ಟು? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ವಿಜಯಲಕ್ಷ್ಮಿ ಖಾತೆಗೆ ಹರಿದು ಬಂದ ಹಣ ಎಷ್ಟು?
Actress Vijaylakshmi

ನಾಗಮಂಡಲ ವಿಜಯಲಕ್ಷ್ಮಿ ಇತ್ತೀಚೆಗೆ ಹಲವು ಬಾರಿ ಹಣಕಾಸಿನ ನೆರವಿಗೆ ಮನವಿ ಮಾಡಿದ್ದರು. ನೆರವು ಸಿಗದಾದಾಗ ಅಸಹಾಯಕತೆಯಿಂದ  ಆಕ್ರೋಶದಲ್ಲಿ ಮಾತನಾಡಿದ್ದರು. ಇದೇ ವೇಳೆ ತಾಯಿಯನ್ನೂ ಕಳೆದುಕೊಂಡ ವಿಜಯಲಕ್ಷ್ಮಿ ನೆರವಿಗೆ ಕನ್ನಡಿಗರು ಮುಂದಾಗಿದ್ದಾರೆ. ತಾಯಿಯ ಅಂತ್ಯ ಸಂಸ್ಕಾರಕ್ಕೂ ಪರದಾಡುತ್ತಿದ್ದ ವಿಜಯಲಕ್ಷ್ಮಿ ನೆರವಿಗೆ ಧಾವಿಸಿದ್ದಾರೆ. ವಿಜಯಲಕ್ಷ್ಮಿ ಪರವಾಗಿ ನೆರವು ಕೇಳಿದ್ದ ಜನಸ್ನೇಹಿ ಅನಾಥಾಶ್ರಮಕ್ಕೆ ಸಾವಿರಾರು ಮಂದಿ ನೆರವು ಕೊಟ್ಟಿದ್ದಾರೆ. ಹೀಗೆ ಸಂಗ್ರಹವಾದ ಒಟ್ಟು ಹಣ 6 ಲಕ್ಷದ 92 ಸಾವಿರದ 350 ರೂ.

ಇಷ್ಟೂ ಹಣವನ್ನು ಫಿಲ್ಮ್ ಚೇಂಬರ್‍ನಲ್ಲಿ ಎಲ್ಲರ ಸಮ್ಮುಖದಲ್ಲಿಯೇ ವಿಜಯಲಕ್ಷ್ಮಿ ಅವರ ಖಾತೆಗೆ ವರ್ಗಾವಣೆ ಮಾಡಿದ ಜನಸ್ನೇಹಿ ಅನಾಥಾಶ್ರಮ, ಅಕೌಂಟ್ ಲೆಕ್ಕವನ್ನೂ ನೀಡಿದೆ. ಈ ಮೂಲಕ ಅನುಮಾನ ವ್ಯಕ್ತಪಡಿಸಿದ್ದವರಿಗೂ ಉತ್ತರ ಕೊಟ್ಟಿದೆ.

ಇದೇ ವೇಳೆ ಮಾತನಾಡಿದ ವಿಜಯಲಕ್ಷ್ಮಿ ನೆರವು ನೀಡಿದವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಶಿವಣ್ಣ, ಸುದೀಪ್, ಯಶ್, ಶ್ರುತಿ, ಪ್ರೇಮಾ, ಸುಧಾರಾಣಿ ಸೇರಿದಂತೆ ಹಲವರು ಮಾತನಾಡಿದ್ದಾರೆ. ನೆರವು ನೀಡಿದ್ದಾರೆ ಎಂದಿರುವ ವಿಜಯಲಕ್ಷ್ಮಿ, ಇನ್ನು ಮುಂದೆ ಚಿತ್ರಗಳಲ್ಲಿ ನಟಿಸುತ್ತೇನೆ. ಇಲ್ಲೇ ಇರುತ್ತೇನೆ. ಇಲ್ಲೇ ಬದುಕುತ್ತೇನೆ ಎಂದಿದ್ದಾರೆ.