ಡಾ.ರಾಜ್ ಮತ್ತು ರಜನಿಕಾಂತ್ ಕುಟುಂಬದ ನಡುವಿನ ಬಾಂಧವ್ಯ, ಅನ್ಯೋನ್ಯತೆ ಇಂದು ನಿನ್ನೆಯದಲ್ಲ. ಈ ಬಾಂಧವ್ಯದ ಪರಿಣಾಮವೇ ಈಗ ನಿನ್ನ ಸನಿಹಕೆ ಚಿತ್ರಕ್ಕೆ ರಜನಿಕಾಂತ್ ಆಶೀರ್ವಾದವೂ ಸಿಗುತ್ತಿದೆ. ಇದೇ ವಾರ ರಿಲೀಸ್ ಆಗುತ್ತಿರೋ ನಿನ್ನ ಸನಿಹಕೆ ಚಿತ್ರವನ್ನು ನೋಡೋಕೆ ಉತ್ಸುಕರಾಗಿದ್ದಾರಂತೆ ರಜನಿ.
ನಿನ್ನ ಸನಿಹಕೆ.. ಸೂರಜ್ ಗೌಡ ನಟಿಸಿ, ನಿರ್ದೇಶಿಸಿರುವ ಸಿನಿಮಾ. ಈ ಚಿತ್ರದ ಮೂಲಕ ಧನ್ಯಾ ರಾಮ್‍ಕುಮಾರ್ ಮೊದಲ ಬಾರಿಗೆ ನಾಯಕಿಯಾಗಿ ತೆರೆಗೆ ಪರಿಚಿತರಾಗುತ್ತಿದ್ದಾರೆ. ರಾಜ್ ಕುಟುಂಬದಿಂದ ಬರುತ್ತಿರೋ ಮೊದಲ ಹೀರೋಯಿನ್ ಧನ್ಯಾ ರಾಮ್‍ಕುಮಾರ್. ಈಗಾಗಲೇ ಚಿತ್ರಕ್ಕೆ ಶಿವಣ್ಣ, ಪುನೀತ್ ಮತ್ತು ರಾಘವೇಂದ್ರ ರಾಜ್‍ಕುಮಾರ್ ಆಶೀರ್ವಾದ ಸಿಕ್ಕಿದೆ.
ಈಗ ಸಿನಿಮಾವನ್ನು ಚೆನ್ನೈಗೆ ತೆಗೆದುಕೊಂಡು ಹೋಗಿ ರಜನಿಕಾಂತ್ ಅವರಿಗೆ ತೋರಿಸಲು ನಿರ್ಧರಿಸಿದೆ ನಿನ್ನ ಸನಿಹಕೆ ಟೀಂ.