ದಸರಾ ಹಬ್ಬಕ್ಕೆ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಮತ್ತು ದುನಿಯಾ ವಿಜಯ್ ಅವರ ಸಲಗ ಮುಖಾಮುಖಿಯಾಗುತ್ತಿವೆ. ಇಬ್ಬರು ಸ್ಟಾರ್ ನಟರ ಚಿತ್ರಗಳ ಮುಖಾಮುಖಿ ಚಿತ್ರರಂಗಕ್ಕೆ ಲಾಭವೋ.. ನಷ್ಟವೋ.. ಎಂಬ ಚರ್ಚೆ ಚಾಲ್ತಿಯಲ್ಲಿರುವಾಗಲೇ ಇನ್ನೊಂದು ಚಿತ್ರ ಕ್ಯೂನಲ್ಲಿ ಸೇರಿದೆ. ಅದು ಡಾರ್ಲಿಂಗ್ ಕೃಷ್ಣ ಅಭಿನಯದ ಶ್ರೀಕೃಷ್ಣ@ಜಿಮೇಲ್.ಕಾಮ್.
ಇದು ಸಂದೇಶ್ ಪ್ರೊಡಕ್ಷನ್ಸ್ ಸಿನಿಮಾ. ಕೃಷ್ಣ ಜೊತೆ ಇದೇ ಮೊದಲ ಬಾರಿಗೆ ಜಾಕಿ ಭಾವನಾ ನಾಯಕಿಯಾಗಿ ನಟಿಸಿದ್ದಾರೆ. ಮೈನಾ ಖ್ಯಾತಿಯ ನಾಗಶೇಖರ್ ನಿರ್ದೇಶನದ ಶ್ರೀಕೃಷ್ಣ@ಜಿಮೇಲ್.ಕಾಮ್ ಚಿತ್ರಕ್ಕೆ ಚಿತ್ರಕಥೆ ಬರೆದಿರುವುದು ಇನ್ನೊಬ್ಬ ನಿರ್ದೇಶಕ ಪ್ರೀತಂ ಗುಬ್ಬಿ. ಚಂದನ್ ಗೌಡ 2ನೇ ನಾಯಕನಾಗಿ ನಟಿಸಿದ್ದರೆ, ರಿಷಬ್ ಶೆಟ್ಟಿ ಅತಿಥಿ ನಟರಾಗಿ ಕಾಣಿಸಿಕೊಂಡಿದ್ದಾರೆ.