ಕೆ.ಎಂ.ಕಾರ್ಯಪ್ಪ. ದೇಶಕ್ಕೆ ದೇಶವೇ ಕೊಂಡಾಡಿದ ವೀರ ಸೇನಾನಿ. ಭಾರತವನ್ನು ಪಾಕ್ ವಿರುದ್ಧ ಮೊದಲ ಯುದ್ಧದಲ್ಲಿ ಗೆಲ್ಲಿಸಿ, ಭಾರತವನ್ನು ರಕ್ಷಿಸಿಕೊಟ್ಟ ರಣಧೀರ. ನಮ್ಮ ನೆಲದ ವೀರಯೋಧ. ಕಾರ್ಯಪ್ಪನವರ ಸಾಹಸಗಳ ಬಗ್ಗೆ ದಂತಕಥೆಗಳೇ ಇವೆ. ಈ ವೀರಯೋಧನ ಕಥೆಯನ್ನು ಸಿನಿಮಾ ಮಾಡೋಕೆ ಮುಂದಾಗಿದ್ದಾರೆ ನೆನಪಿರಲಿ ಪ್ರೇಮ್. ಕಾರ್ಯಪ್ಪ ಪಾತ್ರದಲ್ಲಿ ಸ್ವತಃ ಪ್ರೇಮ್ ಕಾಣಿಸಿಕೊಳ್ಳಲಿದ್ದಾರೆ. ಪ್ರೇಮಂ ಪೂಜ್ಯಂ ಚಿತ್ರತಂಡವೇ ಕಾರ್ಯಪ್ಪನವರ ಜೀವನ ಚರಿತ್ರೆಗೆ ಬಂಡವಾಳ ಹೂಡುತ್ತಿದೆ. ಪ್ರೇಮಂ ಪೂಜ್ಯಂ ತಂಡ ಘೋಷಿಸಿದ್ದ 400ರಿಂದ 500 ಕೋಟಿ ಬಜೆಟ್‍ನ ಚಿತ್ರ ಕಾರ್ಯಪ್ಪನವರದ್ದೇ.
ಪ್ರೇಮಂ ಪೂಜ್ಯಂ ನಿರ್ದೇಶಕ ಡಾ.ರಾಘವೇಂದ್ರ, ನಿರ್ಮಾಪಕರಾದ ಮಾಧವ್ ಸೇರಿದಂತೆ ಹಲವು ಕಾರ್ಯಪ್ಪ ಮನೆಗೆ ಭೇಟಿ ನೀಡಿದ್ದರು. ಚಿತ್ರತಂಡಕ್ಕೆ ಕಾರ್ಯಪ್ಪ ಪುತ್ರ ಏರ್ ಮಾರ್ಷಲ್ ನಂದ ಕಾರ್ಯಪ್ಪ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ವಿಶ್ವದ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಲಿರುವ ಚಿತ್ರಕ್ಕೆ ಹಾಲಿವುಡ್ ತಂತ್ರಜ್ಞರು ಎಂಟ್ರಿ ಕೊಡಲಿದ್ದಾರೆ.
ಕನ್ನಡದ ಹೆಮ್ಮೆಯ ಪುತ್ರನ ಜೀವನ ಚರಿತ್ರೆ ಸಿನಿಮಾ ಆಗುತ್ತಿರುವುದೇ ಹೆಮ್ಮೆಯ ವಿಷಯ.