ರಿಲೀಸ್ ಹಬ್ಬ ಶುರುವಾಗುತ್ತಿದೆ. ಸಲಗ, ಕೋಟಿಗೊಬ್ಬ 3, ಭಜರಂರಿ 2 ರಿಲೀಸ್ ಪ್ರಕಟವಾಗುತ್ತಿದ್ದಂತೆಯೇ ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಸಿನಿಮಾ ಕೂಡಾ ರಿಲೀಸ್ ಆಗೋ ತಯಾರಿ ನಡೆಸಿರುವ ಸುದ್ದಿ ಬಂದಿದೆ.
ವಿಜಯ್ ಕುಮಾರ್ ಕೊಂಡ ನಿರ್ದೇಶನದ ರೈಡರ್ ಚಿತ್ರದ ಡಬ್ಬಿಂಗ್ ಸೂಪರ್ ಸ್ಪೀಡ್‍ನಲ್ಲಿ ನಡೆಯುತ್ತಿದೆ. ನಿಖಿಲ್ ತಮ್ಮ ಪಾತ್ರದ ಡಬ್ಬಿಂಗ್‍ನ್ನೂ ಮುಗಿಸಿಕೊಟ್ಟಿದ್ದಾರೆ. ಟಿ ಸಿರೀಸ್ ಮತ್ತು ಲಹರಿ ಮ್ಯೂಸಿಕ್ ಒಟ್ಟಿಗೇ ನಿರ್ಮಾಣ ಮಾಡುತ್ತಿರುವ ಸಿನಿಮಾ ರೈಡರ್. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ರಿಲೀಸ್ ಆಗುವ ಸಾಧ್ಯತೆ ಇದೆ.
ಸದ್ಯಕ್ಕೆ ರೈಡರ್ ಚಿತ್ರವನ್ನು ನವೆಂಬರ್ 1ಕ್ಕೆ ರಿಲೀಸ್ ಮಾಡುವ ಸಲುವಾಗಿ ಚಿತ್ರತಂಡ ಪ್ಲಾನ್ ಮಾಡುತ್ತಿದೆ ಎನ್ನುವ ಸುದ್ದಿ ಇದೆ. ಕಶ್ಮೀರಾ ಪರ್‍ದೇಶಿ, ಸಂಪದಾ ನಾಯಕಿಯಾಗಿರುವ ಚಿತ್ರದಲ್ಲಿ ಬ್ಯಾಸ್ಕೆಟ್‍ಬಾಲ್ ಆಟಗಾರನ ಕಥೆ ಇದೆ.