` ಜೇಮ್ಸ್ ಟಿವಿ ರೈಟ್ಸ್ 15 ಕೋಟಿಗೆ ಸೇಲ್? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಜೇಮ್ಸ್ ಟಿವಿ ರೈಟ್ಸ್ 15 ಕೋಟಿಗೆ ಸೇಲ್?
James Movie Image

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮತ್ತೊಮ್ಮೆ ತಮ್ಮ ಪವರ್ ತೋರಿಸಿದ್ದಾರೆ. ಯುವರತ್ನ ಚಿತ್ರ ರಿಲೀಸ್ ಆದ ಮೂರು ದಿನಕ್ಕೆ ಕೊರೊನಾ ನಿರ್ಬಂಧ ಎದುರಾದರೂ ಸಕ್ಸಸ್ ತೋರಿಸಿದ್ದರು ಅಪ್ಪು. ನಂತರ ಒಟಿಟಿಯಲ್ಲೂ ಮೋಡಿ ಮಾಡಿತ್ತು ಯುವರತ್ನ. ಈಗ ಜೇಮ್ಸ್‍ನಲ್ಲಿಯೂ ಅದು ಕಂಟಿನ್ಯೂ ಆಗಿದೆ.

ಪುನೀತ್ ಮತ್ತು ಭರ್ಜರಿ ಚೇತನ್ ಕಾಂಬಿನೇಷನ್ನಿನ ಸಿನಿಮಾ ಜೇಮ್ಸ್. ಕಿಶೋರ್ ಪತ್ತಿಕೊಂಡ ನಿರ್ಮಾಣದ ಜೇಮ್ಸ್‍ನಲ್ಲಿ ಪ್ರಿಯಾ ಆನಂದ್, ಶರತ್ ಕುಮಾರ್, ತೆಲುಗಿನ ಶ್ರೀಕಾಂತ್, ಅನುಪ್ರಭಾಕರ್, ರಂಗಾಯಣ ರಘು, ಮುಖೇಶ್ ರಿಷಿ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಹೀಗಾಗಿಯೇ ಚಿತ್ರಕ್ಕೆ ಭರ್ಜರಿ ಡಿಮ್ಯಾಂಡ್ ಸೃಷ್ಟಿಯಾಗಿದೆ.

ಮೂಲಗಳ ಪ್ರಕಾರ ಜೇಮ್ಸ್ ಚಿತ್ರದ ಟಿವಿ ರೈಟ್ಸ್ 15 ಕೋಟಿಗೆ ಮಾರಾಟವಾಗಿದೆ. ಇದೂ ಒಂದು ದಾಖಲೆ. ಸ್ಯಾಟಲೈಟ್ ರೈಟ್ಸ್‍ನ್ನು ಖರೀದಿಸಿರುವುದು ಸ್ಟಾರ್ ಸುವರ್ಣ ಚಾನೆಲ್ ಎಂಬ ಮಾಹಿತಿ ಇದೆ.