ಕೋವಿಡ್ 19 ಪಾಸಿಟಿವಿಟಿ ದರ ಶೇ.1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶೇ.100ರಷ್ಟು ಪ್ರೇಕ್ಷಕರ ಭರ್ತಿಗೆ ಅವಕಾಶ ನೀಡಿ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ಚಿತ್ರೋದ್ಯಮಕ್ಕೆ ಸ್ವಲ್ಪ ಮಟ್ಟಿಗೆ ರಿಲೀಫ್ ನೀಡಿರುವುದು ಸತ್ಯ. ಆದರೆ ಷರತ್ತುಗಳಿವೆ. ಸದ್ಯದ ಪಾಸಿಟಿವಿಟಿ ರೇಟ್ ಪ್ರಕಾರ ರಾಜ್ಯದ 4 ಜಿಲ್ಲೆಗಳಲ್ಲಿ ಶೇ.100ರಷ್ಟು ಹೌಸ್`ಫುಲ್ ಸಾಧ್ಯವಿಲ್ಲ.
ಉಡುಪಿ :ಶೇ.1.36
ಚಿಕ್ಕಮಗಳೂರು : ಶೇ.1.27
ದಕ್ಷಿಣ ಕನ್ನಡ (ಮಂಗಳೂರು) : ಶೇ.1.19
ಕೊಡಗು : ಶೇ.1.14
ಈ 4 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.1ಕ್ಕಿಂತ ಹೆಚ್ಚಿದೆ. ಇಲ್ಲಿ ಶೇ.50ರಷ್ಟು ಸೀಟುಗಳ ಭರ್ತಿಗಷ್ಟೇ ಅವಕಾಶ ಇದೆ. ಇವುಗಳನ್ನು ಹೊರತುಪಡಿಸಿ ರಾಜ್ಯದ ಉಳಿದ ಎಲ್ಲ ಜಿಲ್ಲೆಗಳಲ್ಲಿ ಥಿಯೇಟರ್ಸ್ ಶೇ.100ರಷ್ಟು ಭರ್ತಿಯಾಗಬಹುದು. ಸೋಂಕು ಹೆಚ್ಚಿದರೆ ಶೇ.2ರ ಗಡಿ ದಾಟಿದರೆ ಥಿಯೇಟರ್ ಬಂದ್ ಆಗುವ ಆತಂಕವೂ ಇದೆ.
ಹೀಗಿದ್ದರೂ ಟಾಕೀಸುಗಳಿಗೆ ವೃದ್ಧರು, ಮಕ್ಕಳು ಹಾಗೂ ಗರ್ಭಿಣಿಯರು ಬರುವಂತಿಲ್ಲ. ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸಿಂಗ್, ಶೌಚಾಲಯ ಕ್ಲೀನಿಂಗ್ ಎಲ್ಲವನ್ನೂ ಥಿಯೇಟರುಗಳವರು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಕ್ಟೋಬರ್ 1ರಿಂದ ಚಿತ್ರಮಂದಿರ ಫುಲ್ ಓಪನ್ ಆದರೆ, ಯಾವ್ಯಾವ ಚಿತ್ರಗಳು ರಿಲೀಸ್ ಆಗಲಿವೆ ಎನ್ನುವುದನ್ನ ಕಾದು ನೋಡಬೇಕು.