ಲವ್ ಮಾಕ್`ಟೇಲ್ ಸಕ್ಸಸ್ ನಂತರ ಫುಲ್ ರೊಮ್ಯಾಂಟಿಕ್ ಸ್ಟಾರ್ ಆಗಿರುವ ಡಾರ್ಲಿಂಗ್ ಕೃಷ್ಣ ಶ್ರೀಕೃಷ್ಣ@ಜಿಮೇಲ್, ಲವ್ ಮಾಕ್`ಟೇಲ್ 2, ಶುಗರ್ ಫ್ಯಾಕ್ಟರಿ, ಮಿ.ಬ್ಯಾಚುಲರ್, ಲಕ್ಕಿ ಮ್ಯಾನ್, ಲವ್ ಮೀ ಆರ್ ಹೇಟ್ ಮೀ.. ಹೀಗೆ ಸಾಲು ಸಾಲು ರೊಮ್ಯಾಂಟಿಕ್ ಸ್ಟೋರಿಗಳನ್ನೇ ಒಪ್ಪಿಕೊಂಡಿದ್ದಾರೆ. ಮಿಲನಾ ನಾಗರಾಜ್, ರಚಿತಾ ರಾಮ್, ಅಶಿಕಾ ರಂಗನಾಥ್, ಜಾಕಿ ಭಾವನಾ, ಸೋನಲ್ ಮಂಥೆರೋ, ಅದ್ವಿತಿ ಶೆಟ್ಟಿ.. ಹೀಗೆ ಹಲವರೊಂದಿಗೆ ರೊಮ್ಯಾನ್ಸ್ ಮಾಡುತ್ತಲೇ ಇದ್ದಾರೆ. ಈಗ ಅವರೆಲ್ಲರ ಲಿಸ್ಟಿಗೆ ಇನ್ನಿಬ್ಬರು ಸೇರ್ಪಡೆ. ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ.
ಶಿವತೇಜಸ್ ನಿರ್ದೇಶಿಸುತ್ತಿರುವ ಹೊಸ ಚಿತ್ರಕ್ಕಿನ್ನೂ ನಾಮಕರಣವಾಗಿಲ್ಲ. ಆದರೆ ಇದೊಂದು ಪಕ್ಕಾ ರೊಮ್ಯಾಂಟಿಕ್ ಲವ್ ಸ್ಟೋರಿ. ಪ್ರೀತಿ, ಲಿವ್ ಇನ್ ರಿಲೇಶನ್‍ಶಿಪ್, ಮದುವೆಗಳ ಸುತ್ತ ಇರುವ ಕಾಮಿಡಿ ಲವ್ ಸ್ಟೋರಿ ಎಂದಿದ್ದಾರೆ ಶಿವತೇಜಸ್. ಅಕ್ಟೋಬರ್‍ನಲ್ಲಿ ಸಿನಿಮಾ ಶೂಟಿಂಗ್ ಶುರುವಾಗುತ್ತಿದ್ದು, ರಂಗಾಯಣ ರಘು, ತಬಲಾ ನಾಣಿ ಮತ್ತು ಸಾಧು ಕೋಕಿಲ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ.