ಎಲ್ಲವೂ ಪ್ಲಾನ್ ಪ್ರಕಾರವೇ ಆಗಿದ್ದರೆ, ದುನಿಯಾ ವಿಜಯ್ ನಿರ್ದೇಶನದ ಮೊದಲ ಸಿನಿಮಾ ಸಲಗ, ವರಮಹಾಲಕ್ಷ್ಮಿ ಹಬ್ಬಕ್ಕೇ ರಿಲೀಸ್ ಆಗಬೇಕಿತ್ತು. ಆಗಲಿಲ್ಲ. ಗಣೇಶ ಹಬ್ಬಕ್ಕೂ ಬರಲಿಲ್ಲ. ಆದರೀಗ ಮುಹೂರ್ತ ಫಿಕ್ಸ್ ಮಾಡಿಕೊಂಡಿರೋ ಹಾಗಿದೆ. ಜೊತೆಯಲ್ಲೋ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಕೂಡಾ ರಿಲೀಸ್ ಡೇಟ್ ಫೈನಲ್ ಮಾಡಿಕೊಂಡಿರೋ ಹಾಗಿದೆ.
ಶುಕ್ರವಾರದ ಸಿನಿಮಾ ಜಾಹೀರಾತುಗಳಲ್ಲಿ ಎರಡೂ ಚಿತ್ರಗಳು ಈ ರೀತಿಯದ್ದೊಂದು ಹಿಂಟ್ ನೀಡಿವೆ.
ವಿಶೇಷವೆಂದರೆ ಸಲಗ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಕೋಟಿಗೊಬ್ಬ 3 ನಿರ್ಮಾಪಕ ಸೂರಪ್ಪ ಬಾಬು, ಭಜರಂಗಿ 2 ನಿರ್ಮಾಪಕ ಜಯಣ್ಣ ಸೇರಿದಂತೆ ಕೆಲವು ನಿರ್ಮಾಪಕರು ಸೆ.21ರಂದು ಆರೋಗ್ಯ ಸಚಿವ ಸುಧಾಕರ್ ಅವರನ್ನು ಭೇಟಿ ಮಾಡಿದ್ದರು. ಅದಾದ ನಂತರ ಇಂದು ಅಂದರೆ ಸೆ.24ರಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಇಂದು ಥಿಯೇಟರ್‍ಗಳಿಗೆ 100% ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುವ ನಿರ್ಣಯ ಹೊರಬೀಳುವ ಸಾಧ್ಯತೆ ಇದೆ.