ಗುರುರಾಯರೆಂದರೆ ಭಕ್ತಿ ಭಾವದಿಂದಲೇ ವಂದಿಸುವ ನಟ ಜಗ್ಗೇಶ್ ಹೊಸ ಸಿನಿಮಾ ಹೆಸರು ರಾಘವೇಂದ್ರ ಸ್ಟೋರ್ಸ್. ಈ ಬಾರಿ ಜಗ್ಗೇಶ್ ಅವರನ್ನು ಡಿಫರೆಂಟ್ ಆಗಿ ತೋರಿಸೋಕೆ ಹೊರಟಿರೋದು ಸ್ಟಾರ್ ನಿರ್ದೇಶಕ ಸಂತೋಷ್ ಆನಂದರಾಮ್. ಯಶ್ ಮತ್ತು ಪುನೀತ್`ಗೆ ಸೂಪರ್ ಹಿಟ್ ಕೊಟ್ಟಿರೋ ಸಂತೋಷ್ ಆನಂದರಾಮ್, ಈ ಬಾರಿ ಜಗ್ಗೇಶ್‍ಗೆ ಬ್ಲಾಕ್ ಬಸ್ಟರ್ ಕೊಡೋ ಉತ್ಸಾಹದಲ್ಲಿದ್ದಾರೆ. ಅಂದಹಾಗೆ ಇದು ಹೊಂಬಾಳೆ ಫಿಲಮ್ಸ್ ಪ್ರೊಡಕ್ಷನ್‍ನದ್ದು.
ರಾಘವೇಂದ್ರ ಸ್ಟೋರ್ಸ್ ಸಿನಿಮಾದ ಫಸ್ಟ್ ಲುಕ್‍ನಲ್ಲಿ ಜಗ್ಗೇಶ್ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನ್ಸ್ 1972 ಎಂದಿರೋ ಟ್ಯಾಗ್‍ಲೈನ್ ನೋಡಿದರೆ, ಇದೊಂದು ಪಕ್ಕಾ ಪ್ರಾವಿಷನ್ ಸ್ಟೋರ್ ಮಾಲೀಕನ ಕಥೆ ಅಥವಾ ಅಡುಗೆ ಭಟ್ಟನ ಕಥೆ ಇರಬಹುದು ಎನ್ನಿಸುತ್ತಿದೆ. ಅಡುಗೆ ಮಸಾಲೆ ಬಾಕ್ಸ್‍ನಲ್ಲಿ ಜಗ್ಗೇಶ್ ವಿವಿಧ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನೊಂದು ವಿಶೇಷವೆಂದರೆ ಇದು ಹೊಂಬಾಳೆಯವರ 12ನೇ ಸಿನಿಮಾ. ಕೆಜಿಎಫ್ ಚಾಪ್ಟರ್ 2 ರಿಲೀಸ್ ಮಾಡೋಕೆ ರೆಡಿಯಾಗಿದ್ದುಕೊಂಡೇ ಘೋಷಿಸಿರೋ 6ನೇ ಸಿನಿಮಾ. ಈಗಾಗಲೇ ಪ್ರಭಾಸ್ ಜೊತೆ ಸಲಾರ್, ಶ್ರೀಮುರಳಿ ಜೊತೆ ಬಘೀರ, ಪುನೀತ್ ಜೊತೆ ದ್ವಿತ್ವ, ರಕ್ಷಿತ್ ಶೆಟ್ಟಿ ಜೊತೆ ರಿಚರ್ಡ್ ಆಂಟನಿ, ರಿಷಬ್ ಶೆಟ್ಟಿ ಜೊತೆ ಕಾಂತಾರಾ ಮತ್ತೀಗ ಜಗ್ಗೇಶ್ ಜೊತೆ ರಾಘವೇಂದ್ರ ಸ್ಟೋರ್ಸ್.