Print 
theater,

User Rating: 0 / 5

Star inactiveStar inactiveStar inactiveStar inactiveStar inactive
 
ಚಿತ್ರಮಂದಿರ 100% : ಸರ್ಕಾರದಲ್ಲೇ ಕಮ್ಯುನಿಕೇಷನ್ ಕನ್‍ಫ್ಯೂಷನ್
ಚಿತ್ರಮಂದಿರ 100% : ಸರ್ಕಾರದಲ್ಲೇ ಕಮ್ಯುನಿಕೇಷನ್ ಕನ್‍ಫ್ಯೂಷನ್

ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ 100% ಪ್ರೇಕ್ಷಕರಿಗೆ ಅವಕಾಶ ಕೊಡಲಾಗುವುದು ಎಂಬ ಸುದ್ದಿ ಈಗ ಜೋರಾಗಿದೆ. ದಿನೇ ದಿನೇ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವುದೇ ಇದಕ್ಕೆಲ್ಲ ಕಾರಣ. ಆದರೆ, ರಾಜ್ಯ ಸರ್ಕಾರದ ಮಟ್ಟದಲ್ಲಿ ಕನ್‍ಫ್ಯೂಷನ್ ಮತ್ತು ಕಮ್ಯುನಿಕೇಷನ್ ಪ್ರಾಬ್ಲಂ ಇನ್ನೂ ಮುಗಿದಿಲ್ಲ. ಕೊರೊನಾ ಶುರುವಾಗಿ 2 ವರ್ಷವಾದರೂ ಒಂದು ಕಮ್ಯುನಿಕೇಷನ್ ಇಟ್ಟುಕೊಳ್ಳೋಕೆ ಸಾಧ್ಯವಾಗಿಲ್ಲ.

100% ಪರ್ಮಿಷನ್ ಕೊಡ್ತಾರಂತೆ ನಿಜಾನಾ? ಬಿಬಿಎಂಪಿ ವರದಿ ಕೊಟ್ಟಿದೆಯಂತೆ ಹೌದಾ ಎಂದರೆ.. ನಮಗೇನೂ ಗೊತ್ತೇ ಇಲ್ಲ. ಸರ್ಕಾರ ಹೇಗೆ ಹೇಳುತ್ತೋ ನಾವು ಹಾಗೆ ಮಾಡ್ತೀವಿ. ಅದೆಲ್ಲವೂ ಸರ್ಕಾರದ ಮಟ್ಟದಲ್ಲಿ ನಿರ್ಧಾರ ಆಗಬೇಕು ಅಂತಾ ಹೇಳಿಕೆ ಕೊಟ್ಟಿರೋದು ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ. ಬಹುಶಃ ಅವರಿಗೆ ತಾವೇ ಸರ್ಕಾರದ ಭಾಗ ಎಂಬುದೇ ಮರೆತು ಹೋದಹಾಗಿದೆ. ಕೊರೊನಾ ಎಫೆಕ್ಟು.

ಇನ್ನು ಆರೋಗ್ಯ ಸಚಿವ ಸುಧಾಕರ್ ಅವರು ಇನ್ನೂ ಈ ಬಗ್ಗೆ ಚಿಂತಿಸುತ್ತಿದ್ದೇವೆ ಎಂದಿದ್ದಾರೆ. ಚಿತ್ರರಂಗ ತುಂಬಾ ನಷ್ಟಕ್ಕೊಳಗಾಗಿದ್ದು, ಪೂರ್ಣ ಬೆಂಬಲ ನೀಡಲು ಚಿಂತನೆ ಮಾಡುತ್ತೇವೆ ಎಂದಿದ್ದಾರೆ. ಎರಡು ವರ್ಷಗಳಿಂದಲೂ ಸತತವಾಗಿ ನಡೆಯುತ್ತಿರುವ ಚಿಂತನೆ ಶೀಘ್ರದಲ್ಲೇ ಮುಗಿಯಬಹುದು. ಥಿಯೇಟರ್‍ಗಳ ಓಪನ್ ಮತ್ತು ಪ್ರೇಕ್ಷಕರಿಗೆ 100% ಅವಕಾಶ ಸಿಗಬಹುದು. ವೇಯ್ಟ್ ಮಾಡೋಣ.