ತರಲೆ ತುಂಟಾಟಗಳನ್ನಿಟ್ಟುಕೊಂಡು ಚೇಷ್ಟೆ ಮಾಡೋದ್ರಲ್ಲಿ ವಿಜಯ ಪ್ರಸಾದ್ ಎತ್ತಿದ ಕೈ. ಬನ್ನಿ ಪಂಪ್ ಹೊಡೆಯೋಣ ಎಂದು ಹೇಳಿಯೇ ಟ್ರೇಲರ್‍ಗೆ ವೆಲ್‍ಕಂ ಹೇಳೋ ವಿಜಯ್ ಪ್ರಸಾದ್, ಇಲ್ಲಿಯೂ ಬೀಜವನ್ನು ಮರೆತಿಲ್ಲ. ಕೊನೆಗೆ ನಮ್ಮ ಮನೆಯಲ್ಲಿ ಉಕ್ಕಿಸಿದಂತೆ ನಾಳೆ ನಿಮ್ಮ ಮನೆಯಲ್ಲೂ ಉಕ್ಕಿಸಿ.. ಹಾಲನ್ನ.. ಎನ್ನೋ ಡಬಲ್ ಮೀನಿಂಗ್ ಇಟ್ಟು ಟ್ರೇಲರ್ ಮುಗಿಸಿದ್ದಾರೆ.
ಇದು ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೇಲರು. ಮಧ್ಯೆ ಒಂದಿಷ್ಟು ಭಾವನೆಗಳ ಜೋಕಾಲಿಯೂ ಇದೆ. ನೀನಾಸಂ ಸತೀಶ್, ಹರಿಪ್ರಿಯಾ ನಟಿಸಿರುವ ಚಿತ್ರಕ್ಕೆ ನಿರ್ಮಾಪಕರೂ ನೀನಾಸಂ ಸತೀಶ್ ಅವರೇ. ಪೆಟ್ರೋಮ್ಯಾಕ್ಸ್ ಮನೆ ದೇವ್ರಾಣೆಗೂ ಅದಲ್ಲ ಅನ್ನೋ ಟ್ಯಾಗ್‍ಲೈನು ಇಟ್ಟುಕೊಂಡೇ ಬರುತ್ತಿರೋ ಸಿನಿಮಾ, ಭರಪೂರ ಮನರಂಜನೆಯ ಗಂಟೆ ಬಾರಿಸುತ್ತಿದೆ.