ಗೋಲ್ಡನ್ ಸ್ಟಾರ್ ಗಣೇಶ್, ಆದಿತಿ ಪ್ರಭುದೇವ, ಮೇಘಾ ಶೆಟ್ಟಿ ಮತ್ತು ರಚನಾ ಇಂದರ್ ನಟಿಸಿರುವ ತ್ರಿಬಲ್ ರೈಡಿಂಗ್ ಶೂಟಿಂಗ್ ಮುಗಿಸಿದೆ. ಮುಗುಳುನಗೆಯಲ್ಲಿ ನಾಲ್ವರು ನಾಯಕಿಯರ ಜೊತೆ ರೊಮ್ಯಾನ್ಸ್ ಮಾಡಿದ್ದ ಗಣೇಶ್, ಈ ಚಿತ್ರದಲ್ಲಿ ಮೂವರೊಂದಿಗೆ ಡ್ಯುಯೆಟ್ ಹಾಡಿದ್ದಾರೆ. ಮಹೇಶ್ ಗೌಡ ನಿರ್ದೇಶನದ ಈ ಚಿತ್ರದಲ್ಲಿರೋ ಪಕ್ಕಾ ರೊಮ್ಯಾಂಟಿಕ್ ಲವ್ ಸ್ಟೋರಿ.
ರಾಮ್ ಗೋಪಾಲ್ ನಿರ್ಮಾಣದ ತ್ರಿಬಲ್ ರೈಡಿಂಗ್ ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಚುರುಕಾಗಿ ಮಾಡೋಕೆ ಶುರು ಮಾಡಿದೆ. ಸಾಧುಕೋಕಿಲ, ರಂಗಾಯಣ ರಘು, ರವಿಶಂಕರ್ ಗೌಡ, ಕುರಿ ಪ್ರತಾಪ್ ಕೂಡಾ ಇರೋದ್ರಿಂದ ಇಡೀ ಚಿತ್ರದಲ್ಲಿ ನಗು ತುಂಬಿರಲಿದೆ ಎನ್ನೋದ್ರಲ್ಲಿ ಅನುಮಾನವಿಲ್ಲ.