ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ, ಅದ್ಭುತ ಎನ್ನಿಸುವ ರೀತಿಯ ಕ್ರೇಜ್ ಸೃಷ್ಟಿಸಿದೆ. ಬುರ್ಜ್ ಖಲೀಫಾದಲ್ಲಿ ಟೈಟಲ್ ಪೋಸ್ಟರ್, ಮುಂಬೈನಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದ ವಿಕ್ರಾಂತ್ ರೋಣ 2021ರ ಇಂಡಿಯಾದಲ್ಲಿನ ಭಾರಿ ನಿರೀಕ್ಷಿತ ಚಿತ್ರಗಳಲ್ಲೊಂದು. ಆ ಚಿತ್ರದ ಬಿಡುಗಡೆಗೆ ಡಿಸೆಂಬರ್‍ನಲ್ಲಿ ಮುಹೂರ್ತ ಫಿಕ್ಸ್ ಆಗಿದೆ.
ಪರಿಸ್ಥಿತಿ ಸರಿ ಹೋದರೆ ಡಿಸೆಂಬರ್‍ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಡಿಸೆಂಬರ್ ಡೆಡ್‍ಲೈನ್ ಇಟ್ಟುಕೊಂಡೆ ಕೆಲಸ ಮಾಡುತ್ತಿದ್ದೇವೆ. ಎಲ್ಲ ಭಾಷೆಗಳ ಚಿತ್ರರಂಗದ ಬೆಳವಣಿಗೆಗಳನ್ನೂ ನೋಡಬೇಕು. ಬಿಡುಗಡೆಗೆ 10 ದಿನ ಮೊದಲು ಡೇಟ್ ಅನೌನ್ಸ್ ಮಾಡುತ್ತೇವೆ ಎಂದಿದ್ದಾರೆ ಜಾಕ್ ಮಂಜು.
ಹಿಂದಿ, ತಮಿಳು, ತೆಲುಗಿಗೂ ಸುದೀಪ್ ಅವರೇ ಡಬ್ ಮಾಡಿದ್ದಾರಂತೆ. ಮಲಯಾಳಂನಲ್ಲಿ ಮಾತ್ರ ಬೇರೆಯವರು ಡಬ್ ಮಾಡಿದ್ದಾರೆ. ಏನೇ ಇದ್ದರೂ ಮೊದಲ ಬಿಡುಗಡೆ ಚಿತ್ರಮಂದಿರಗಳಲ್ಲೇ. ನಂತರವೇನಿದ್ದರೂ ಓಟಿಟಿ ಎಂದಿದ್ದಾರೆ ಜಾಕ್ ಮಂಜು.
ಜಾಕ್ ಮಂಜು ನಿರ್ಮಾಣದ ಚಿತ್ರದಲ್ಲಿ ಸುದೀಪ್ ಹೀರೋ. ವಿಕ್ರಾಂತ್ ರೋಣ ಪಾತ್ರಧಾರಿ. ನಿರೂಪ್ ಭಂಡಾರಿ ಸಂಜೀವ್ ಗಂಭೀರ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ನೀತಾ ಅಶೋಕ್ ನಟಿಸಿದ್ದರೆ, ಜಾಕ್ವೆಲಿನ್ ಫರ್ನಾಂಡಿಸ್ ಗಡಂಗ್ ರಕ್ಕಮ್ಮನಾಗಿ ಮಿಂಚು ಹರಿಸಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ಅಜನೀಶ್ ಲೋಕನಾಥ್ ಸಂಗೀತವಿದೆ.