` ಡಾಲಿ ಚಿತ್ರಕ್ಕೆ ರವಿಚಂದ್ರನ್ ಬರ್ತಿರೋದು ಸತ್ಯಾನಾ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಡಾಲಿ ಚಿತ್ರಕ್ಕೆ ರವಿಚಂದ್ರನ್ ಬರ್ತಿರೋದು ಸತ್ಯಾನಾ?
Ravichandran

ಹೆಡ್ ಬುಷ್ ಅನ್ನೋ ಸಿನಿಮಾ ಸೆಟ್ಟೇರಿರುವುದು ಎಲ್ಲರಿಗೂ ಗೊತ್ತು. ಡಾನ್ ಜಯರಾಜ್ ಬಯೋಪಿಕ್ ಆಗಿರೋ ಚಿತ್ರಕ್ಕೆ ಧನಂಜಯ್ ಸ್ವತಃ ನಿರ್ಮಾಪಕರು. ಧನಂಜಯ್ ಜೊತೆ ಈ ಚಿತ್ರದಲ್ಲಿ ಯೋಗಿ, ವಸಿಷ್ಠ ಸಿಂಹ, ಶೃತಿ ಹರಿಹರನ್, ರಘು ಮುಖರ್ಜಿ, ಪ್ರಕಾಶ್ ಬೆಳವಾಡಿ.. ಹೀಗೆ ಘಟಾನುಘಟಿಗಳ ದಂಡೇ ಎಂಟ್ರಿ ಕೊಟ್ಟಿದೆ.

ಈಗ ಈ ಚಿತ್ರದಲ್ಲಿ ರವಿಚಂದ್ರನ್ ನಟಿಸಲಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಿದೆ. ಆದರೆ, ಚಿತ್ರತಂಡ ಇದನ್ನು ಕನ್‍ಫರ್ಮ್ ಮಾಡಿಲ್ಲ. ಹಾಗಂತ ಆ ಸುದ್ದಿ ನಂಬಬೇಡಿ ಅಂತಲೂ ಹೇಳಿಲ್ಲ. ರೌಡಿಸಂ ಚಿತ್ರಗಳಲ್ಲಿ ರವಿಚಂದ್ರನ್ ನಟಿಸಿದ್ದೇ ಕಡಿಮೆ. ಅಂತಹ ರವಿ, ರೌಡಿಯೊಬ್ಬನ ಬಯೋಪಿಕ್‍ನಲ್ಲಿ ನಟಿಸಿದರೆ ಎಂತಹ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಅನ್ನೋ ಕುತೂಹಲವಂತೂ ಇದೆ.