Print 
charlie777,

User Rating: 0 / 5

Star inactiveStar inactiveStar inactiveStar inactiveStar inactive
 
ಚಾರ್ಲಿಯ ಟಾರ್ಚರ್ ಸಾಂಗ್ ರಿಲೀಸ್
Charlie 777

ಸ್ಯಾಂಡಲ್ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಗೌರಿ ಹಬ್ಬಕ್ಕೆ ಟಾರ್ಚರ್ ಕೊಟ್ಟಿದ್ದಾರೆ. ಕೆ ಕಿರಣ್ ರಾಜ್ ನಿರ್ದೇಶನದ 777 ಚಾರ್ಲಿ ಸಿನಿಮಾದ  ಟಾರ್ಚರ್ ಹಾಡು ರಿಲೀಸ್ ಆಗಿದೆ. ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ, ಒಟ್ಟು 5 ಭಾಷೆಗಳಲ್ಲೂ ಹಾಡು ಬಿಡುಗಡೆಯಾಗಿದೆ.

ರಕ್ಷಿತ್ ಮತ್ತು ನಾಯಿಯ ನಡುವಿನ ಪಡಿಪಾಟಲು ಟಾರ್ಚರ್ ಹಾಡಿನಲ್ಲಿದೆ. ನಾಯಿ ಕೊಡುವ ಟಾರ್ಚರ್ನ್ನು ಸೊಗಸಾಗಿ ಹಾಡಿರೋದು ವಿಜಯ್ ಪ್ರಕಾಶ್. ಆರೂಮುಕ್ಕಾಲು ನಿಮಿಷದ ಹಾಡಿನಲ್ಲಿ ಒಂದೊಂದು ಫ್ರೇಮ್ ಕೂಡಾ ನೋಡಿಸುತ್ತೆ ಮತ್ತು ಹಾಡು ಕೇಳುವಂತೆ ಮಾಡುತ್ತೆ. ನಾಯಿಯ ಜೊತೆ ರಕ್ಷಿತ್ ಪರದಾಟ ಮಜಾ ಕೊಡುತ್ತೆ.

ನಾಯಿಗಳನ್ನು ಸಾಕೋಕೆ ಅನುಮತಿ ಇಲ್ಲದ ಮನೆಯಲ್ಲಿ ಚಾರ್ಲಿಯನ್ನು ಇಟ್ಟುಕೊಳ್ಳೋ ರಕ್ಷಿತ್, ಚಾರ್ಲಿಯ ತರಲೆ, ತುಂಟಾಟ, ರಕ್ಷಿತ್ ಶೆಟ್ಟಿಯ ಪಡಿಪಾಡಲುಗಳು ನೋಡುವವರಿಗೆ ಸಖತ್ ನಶೆ ಏರಿಸುತ್ತವೆ.

 ಚಾರ್ಲಿಯ ಟಾರ್ಚರ್ ಹಾಡಿನಲ್ಲಿ ಅಚಿಂತ್ಯ ,ಅರ್ಣವ ಎನ್ನುವ ಇಬ್ಬರು ಪುಟ್ಟ ಮಕ್ಕಳೂ ಹಾಡಿದ್ದಾರೆ.

ರಕ್ಷಿತ್ ಶೆಟ್ಟಿಗೆ ಈ ಚಿತ್ರದಲ್ಲಿ ಹೀರೋಯಿನ್ ಆಗಿರೋದು ಸಂಗೀತಾ ಶೃಂಗೇರಿ. ಸಿಂಪಲ್ ಸ್ಟಾರ್ ಜೊತೆಗೆ ಮೊಟ್ಟೆ ಸ್ಟಾರ್ ರಾಜ್ ಬಿ ಶೆಟ್ಟಿ, ಡ್ಯಾನಿಷ್ ಸೇಟ್ ಕೂಡಾ ನಟಿಸಿರೋದು ವಿಶೇಷ. ರಕ್ಷಿತ್ ಶೆಟ್ಟಿ ಮತ್ತು ಜಿಎಸ್ ಗುಪ್ತಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.