ನಟ ಸತೀಶ್ ನೀನಾಸಂ ಕಾಲಿವುಡ್‌ಗೆ ಕಾಲಿಟ್ಟಿದ್ದಾರೆ. ತಮಿಳಿನ ಖ್ಯಾತ ನಟ ಶಶಿಕುಮಾರ್ ಅಭಿನಯದ ಪಗೈವನುಕು ಅರುಳ್ವೈ ಮೂಲಕ ತಮಿಳು ಚಿತ್ರರಂಗದಲ್ಲಿ ಹೆಜ್ಜೆಯಿಟ್ಟಿದ್ದಾರೆ. ಈ ಸಿನಿಮಾದಲ್ಲಿ ಸತೀಶ್, ಆಡುದೊಡ್ಡಿ ರವಿ ಎಂಬ ಪಾತ್ರ ಮಾಡಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ರಮ್ಯಾ ಸತೀಶ್ ಚಿತ್ರಕ್ಕೆ ಪ್ರಮೋಷನ್ ಕೊಟ್ಟಿದ್ದಾರೆ.
ಚಿತ್ರದ ಪೋಸ್ಟರ್ ರಿಲೀಸ್ ಮಾಡಿರುವ ರಮ್ಯಾ ನಮ್ಮ ಕನ್ನಡದ ನಟರೊಬ್ಬರು ತಮಿಳಿನಲ್ಲಿ ನಟಿಸುತ್ತಿರುವುದು ಹೆಮ್ಮೆ ಎಂದಿದ್ದಾರೆ. ಶೇಕ್ಸ್ಪಿಯರ್ ಅವರ ಮ್ಯಾಕ್ಬೆತ್ ನಾಟಕದ ಸ್ಫೂರ್ತಿಯಲ್ಲಿ ತಯಾರಾಗಿರುವ ಚಿತ್ರವಿದು. ರಮ್ಯಾ ಅಷ್ಟೇ ಅಲ್ಲ, ತಮಿಳಿನ ಸ್ಟಾರ್ ನಿರ್ದೇಶಕ ಸಮುದ್ರಕಿಣಿ ಚಿತ್ರದ ಪೋಸ್ಟರ್ ರಿವೀಲ್ ಮಾಡಿದ್ದಾರೆ. ಅನೀಸ್ ಎಂಬುವವರು ನಿರ್ದೇಶನ ಮಾಡಿರುವ ಚಿತ್ರ ಈಗಾಗಲೇ ಚಿತ್ರೀಕರಣ ಪೂರೈಸಿದೆ.
ಆಡುದೊಡ್ಡಿ ರವಿ ಎಂಬ ಖೈಊದಿಯ ಪಾತ್ರದಲ್ಲಿ ನಟಿಸರುವ ಸತೀಶ್, ರಿಯಲ್ ಖೈದಿಗಳ ಜೊತೆ ನಟಿಸಿರುವುದು ವಿಶೇಷ. ಕೊಲೆ, ಸುಲಿಗೆ ಮಾಡಿ ಜೈಲಿಗೆ ಹೋಗಿ ಬಂದ 17 ಖೈದಿಗಳು ಈ ಚಿತ್ರದಲ್ಲಿ ನನ್ನೊಂದಿಗೆ ನಟಿಸಿದ್ದಾರೆ. ಚಿತ್ರದಲ್ಲಿ ನನಗೆ ಎರಡು ಶೇಡ್ಗಳಿವೆ. ಸಿನಿಮಾ ಚೆನ್ನಾಗಿ ಬಂದಿದೆ ಎಂದಿದ್ದಾರೆ ಸತೀಶ್.