` ದೇವಸ್ಥಾನದಲ್ಲಿ ನಟಿ ತ್ರಿಷಾ ಕೃಷ್ಣನ್ ಮಾಡಿದ ಪ್ರಮಾದವೇನು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ದೇವಸ್ಥಾನದಲ್ಲಿ ನಟಿ ತ್ರಿಷಾ ಕೃಷ್ಣನ್ ಮಾಡಿದ ಪ್ರಮಾದವೇನು..?
Actress Trisha krishnan

ನಟಿ ತ್ರಿಷಾ ಕೃಷ್ಣನ್ ಬಂಧನಕ್ಕೆ ಒತ್ತಾಯ ಕೇಳಿ ಬರೋಕೆ ಶುರುವಾಗಿದೆ. ಅದೂ ರಾಜಸ್ತಾನದಿಂದ. ಇಷ್ಟಕ್ಕೂ ತ್ರಿಷಾ ಮಾಡಿಕೊಂಡ ಎಡವಟ್ಟೇನು?

ಇತ್ತೀಚೆಗೆ ರಾಜಸ್ತಾನದ ಇಂಧೋರ್‍ನಲ್ಲಿ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಚಿತ್ರೀಕರಣ ನಡೆದಿತ್ತು. ಆ ಚಿತ್ರದಲ್ಲಿ ಐಶ್ವರ್ಯಾ ರೈ, ತ್ರಿಷಾ ಕೃಷ್ಣನ್, ವಿಕ್ರಂ, ಜಯಂ ರವಿ, ಪ್ರಕಾಶ್ ರೈ, ಜಯರಾಮ್, ಪ್ರಭು ಸೇರಿದಂತೆ ದೊಡ್ಡ ದೊಡ್ಡವರೆಲ್ಲ ನಟಿಸುತ್ತಿದ್ದಾರೆ.

ಆ ಚಿತ್ರದ ಚಿತ್ರೀಕರಣದ ವೇಳೆ ದೇವಸ್ಥಾನವೊಂದರಲ್ಲಿ ನಟಿ ತ್ರಿಷಾ ಚಪ್ಪಲಿ ಹಾಕಿಕೊಂಡೇ ಓಡಾಡಿದ್ದಾರೆ. ತ್ರಿಷಾ ಅವರ ಫೋಟೋಗಳು ವೈರಲ್ ಗಿದ್ದೇ ತಡ, ಹಿಂದೂ ಸಂಘಟನೆಗಳು ಕೆರಳಿ ನಿಂತಿವೆ. ತ್ರಿಷಾ ಕೃಷ್ಣನ್ ಬಂಧನಕ್ಕೆ ಒತ್ತಾಯಿಸುತ್ತಿವೆ.

ಶೂಟಿಂಗ್ ಬಿಡುವಿನಲ್ಲಿ ಶಿವಲಿಂಗ ಮತ್ತು ನಂದಿ ವಿಗ್ರಹದ ಮಧ್ಯೆ ತ್ರಿಷಾ ಚಪ್ಪಲಿ ಧರಿಸಿಕೊಂಡೇ ಓಡಾಡಿದ್ದರು ಎನ್ನುವುದು ಆರೋಪ. ಅದನ್ನು ಪುಷ್ಠೀಕರಿಸುವ ಫೋಟೋಗಳು ವೈರಲ್ ಆಗಿವೆ.

ತ್ರಿಷಾ ಸದ್ಯಕ್ಕೆ ಮಣಿರತ್ನಂ ಚಿತ್ರ, ಮಲಯಾಳಂನಲ್ಲಿ ಒಂದು ಸಿನಿಮಾ ಅಲ್ಲದೆ,  ಕನ್ನಡದಲ್ಲಿ ಪುನೀತ್ ರಾಜ್‍ಕುಮಾರ್ ಅವರ ದ್ವಿತ್ವ ಚಿತ್ರದಲ್ಲೂ ನಟಿಸುತ್ತಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery