Print 
lanke, loose madha yogi,

User Rating: 0 / 5

Star inactiveStar inactiveStar inactiveStar inactiveStar inactive
 
ಹಬ್ಬದ ದಿನ 200+ ಥಿಯೇಟರುಗಳಲ್ಲಿ ಲಂಕೆ ರಿಲೀಸ್
Lanke Movie image

ಲಂಕೆ ದೊಡ್ಡ ಮಟ್ಟದಲ್ಲೇ ರಿಲೀಸ್ ಆಗುತ್ತಿದೆ. ಲಾಕ್ ಡೌನ್ ಮುಗಿದ ಮೇಲೆ ರಿಲೀಸ್ ಆಗುತ್ತಿರುವ ಮೊದಲ ಸ್ಟಾರ್ ಸಿನಿಮಾ ಲಂಕೆ. ಲೂಸ್ ಮಾದ ಖ್ಯಾತಿಯ ಯೋಗಿ, ಕೃಷಿ ತಾಪಂಡ, ಕಾವ್ಯಾ ಶೆಟ್ಟಿ ನಟಿಸಿರೋ ಲಂಕೆ ಸೆ.10ರಂದು 200ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ರಿಲೀಸ್ ಆಗುತ್ತಿದೆ.

ಎಲ್ಲವೂ ಪಕ್ಕಾ ಆಗಿದ್ದರೆ ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾ ಲಂಕೆ. ದಿಢೀರನೆ ಶುರುವಾದ ಮತ್ತೆ ಲಾಕ್ ಡೌನ್ ಭೀತಿಯಿಂದಾಗಿ ಸಿನಿಮಾ ಬಿಡುಗಡೆಯಿಂದ ಹಿಂದೆ ಸರಿದಿದ್ದ ಚಿತ್ರತಂಡ ಈಗ ಧೈರ್ಯವಾಗಿ ಹೆಜ್ಜೆಯಿಟ್ಟಿದೆ. ಚಿತ್ರದ ಬಿಡುಗಡೆಗೂ ಮುನ್ನ ರಿಲೀಸ್ ಆಗಿರುವ ಟ್ರೇಲರ್, ಹಾಡುಗಳಿಗೆ ಸಿಕ್ಕಿರುವ ಒಳ್ಳೆಯ ರೆಸ್ಪಾನ್ಸ್ ನಮಗೆ ಧೈರ್ಯ ನೀಡಿದೆ ಎಂದಿದ್ದಾರೆ ನಿರ್ಮಾಪಕ ಪಟೇಲ್ ಶ್ರೀನಿವಾಸ್.

ರಾಮ್ ಪ್ರಸಾದ್ ಅವರ ನಿರ್ದೇಶನದ ಚಿತ್ರಕ್ಕೆ ಅವರ ಪತ್ನಿ ಸುರೇಖಾ ಕೂಡಾ ಶಕ್ತಿ ತುಂಬಿದ್ದಾರೆ. ಚಿತ್ರದ ನಿರ್ಮಾಪಕರಲ್ಲಿ ಅವರೂ ಒಬ್ಬರು. ಸಂಚಾರಿ ವಿಜಯ್, ಗಾಯತ್ರಿ ಜಯರಾಂ, ಶರತ್ ಲೋಹಿತಾಶ್ವ, ಶೋಭರಾಜ್, ಸುಚೇಂದ್ರ ಪ್ರಸಾದ್, ವಾಣಿಶ್ರೀ.. ಹೀಗೆ ಅದ್ಧೂರಿ ತಾರಾಬಳಗವೇ ಚಿತ್ರದಲ್ಲಿದೆ.