` ಅಗ್ನಿ ಶ್ರೀಧರ್ ಕಥೆ ಎಂದಾಕ್ಷಣ ಓಕೆ ಎಂದರಂತೆ ಶೃತಿ ಹರಿಹರನ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಅಗ್ನಿ ಶ್ರೀಧರ್ ಕಥೆ ಎಂದಾಕ್ಷಣ ಓಕೆ ಎಂದರಂತೆ ಶೃತಿ ಹರಿಹರನ್..!
ಅಗ್ನಿ ಶ್ರೀಧರ್ ಕಥೆ ಎಂದಾಕ್ಷಣ ಓಕೆ ಎಂದರಂತೆ ಶೃತಿ ಹರಿಹರನ್..!

ಡಾಲಿ ಧನಂಜಯ್ ಮತ್ತು ಶೃತಿ ಹರಿಹರನ್ ಜೋಡಿ ಎಂದರೆ ಥಟ್ಟನೆ ನೆನಪಾಗುವ ಸಿನಿಮಾ ರಾಟೆ. ಆ ಜೋಡಿ ಈಗ ಮತ್ತೊಮ್ಮೆ ಒಂದಾಗುತ್ತಿದೆ. ಅದು ಹೆಡ್ ಬುಷ್ ಚಿತ್ರದಲ್ಲಿ. ಸ್ವತಃ ಡಾಲಿ ಧನಂಜಯ್ ನಿರ್ಮಾಣ ಮಾಡ್ತಿರೋ ಚಿತ್ರವಿದು. ಹೀಗಾಗಿ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿವೆ.

ಈ ಚಿತ್ರವನ್ನು ಒಪ್ಪಿಕೊಳ್ಳೋಕೆ ಮೊದಲನೇ ಕಾರಣವೇ ಅಗ್ನಿ ಶ್ರೀಧರ್ ಕಥೆ ಅನ್ನೋದು. ನಮ್ಮ ನಡುವೆ ಇರೋ ಒಳ್ಳೆಯ ಕಥೆಗಾರ ಅಗ್ನಿ ಶ್ರೀಧರ್. ಇನ್ನು ತಂಡದಲ್ಲಿರೋ ಎಲ್ಲರೂ ನನಗೆ ಒಳ್ಳೆ ಫ್ರೆಂಡ್ಸ್ ಕೂಡಾ. ಕಥೆ ಚೆನ್ನಾಗಿದೆ. ನಮ್ಮ ನಡುವೆಯೇ ಬದುಕಿರುವವರ ಪಾತ್ರವನ್ನು ಮಾಡೋದು ದೊಡ್ಡ ಸವಾಲು ಎಂದಿದ್ದಾರೆ ಶೃತಿ ಹರಿಹರನ್. ಅಂದಹಾಗೆ ಇದು ಬೆಂಗಳೂರಿನ ಒಂದು ಕಾಲದ ಡಾನ್ ಎಂಪಿ ಜೈರಾಜ್ ಬಯೋಪಿಕ್.

ಈಗಾಗಲೇ ಹೆಡ್ ಬುಷ್ ಸಿನಿಮಾ ದೊಡ್ಡ ದೊಡ್ಡವರಿಂದ ತುಂಬಿ ತುಳುಕುತ್ತಿದೆ. ಧನಂಜಯ್, ವಸಿಷ್ಠ ಸಿಂಹ, ಪ್ರಕಾಶ್ ಬೆಳವಾಡಿ, ಪಾಯಲ್ ರಜಪೂತ್ ಜೊತೆಗೆ ಈಗ ಶೃತಿ ಹರಿಹರನ್ ಕೂಡಾ ಸೇರಿದ್ದಾಗಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery