` ಸ್ವಿಟ್ಜರ್'ಲ್ಯಾಂಡ್‍ಗೆ ಲಗಾಮ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಸ್ವಿಟ್ಜರ್'ಲ್ಯಾಂಡ್‍ಗೆ ಲಗಾಮ್
Upendra, Haripriya

ಉಪೇಂದ್ರ ಮತ್ತು ಹರಿಪ್ರಿಯಾ ಇದೇ ಮೊದಲ ಬಾರಿ ಜೊತೆಗೂಡಿರುವ ಸಿನಿಮಾ ಲಗಾಮ್. ಈಗಾಗಲೇ 2 ಹಂತದ ಶೂಟಿಂಗ್‍ನ್ನೂ ಮುಗಿಸಿರುವ ಸಿನಿಮಾ, ಈಗ 3ನೇ ಹಂತಕ್ಕೆ ಸ್ವಿಟ್ಜರ್‍ಲ್ಯಾಂಡ್ ಹೋಗೋಕೆ ಪ್ಲಾನ್ ಮಾಡುತ್ತಿದೆ.

ಚಿತ್ರದ ಕಥೆಯ ಪ್ರಕಾರ ವಿದೇಶದ ಅಗತ್ಯ ಇದೆ. ಹೀಗಾಗಿ ನ್ಯೂಜಿಲ್ಯಾಂಡ್‍ಗೆ ಹೋಗೋಕೆ ಅನುಮತಿ ಕೇಳುತ್ತಿದ್ದೇವೆ. ಇನ್ನೂ 50 ದಿನ ಶೂಟಿಂಗ್ ಬಾಕಿ ಇದೆ ಎಂದಿದ್ದಾರೆ ನಿರ್ದೇಶಕ ಮಾದೇಶ್.

ಸಾಯಿಕುಮಾರ್, ಸಾಧುಕೋಕಿಲ, ರಂಗಾಯಣ ರಘು ಕೂಡಾ ನಟಿಸುತ್ತಿರುವ ಲಗಾಮ್ ಚಿತ್ರ 2021ರ ಮೊದಲ ಭಾಗದಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.