ಲಂಕೆ, ಇದೇ ವಾರ ರಿಲೀಸ್ ಆಗುತ್ತಿರುವ ಮಾಸ್ ಸಿನಿಮಾ. ಕ್ಲಾಸ್ ಸಬ್ಜೆಕ್ಟ್‍ನ್ನು ಮಾಸ್ ಸ್ಟೈಲಲ್ಲಿ ಹೇಳ್ತಿದ್ದಾರೆ ಡೈರೆಕ್ಟರ್ ರಾಮ್ ಪ್ರಸಾದ್. ಯೋಗಿ, ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಸಂಚಾರಿ ವಿಜಯ್ ಮೊದಲಾದವರು ನಟಿಸಿರೋ ಚಿತ್ರದ ಹಾಡುಗಳು ಬೇರೆಯದೇ ಫೀಲ್ ಕೊಟ್ಟಿವೆ. ಈ ಸಂಗೀತದ ಹಿಂದಿರೋದು ಕಾರ್ತಿಕ್ ಶರ್ಮಾ.
ಪುಟ್ಟಗೌರಿ ಮದುವೆ ಸೀರಿಯಲ್ ಖ್ಯಾತಿಯ ಕಾರ್ತಿಕ್ ಶರ್ಮಾಗೆ, ಮಾಸ್ ಸಿನಿಮಾ ಮ್ಯೂಸಿಕ್ ಈ ಚಿತ್ರವೇ ಮೊದಲು. ಟೋಟಲ್ ಆಗಿ 4ನೇ ಸಿನಿಮಾ.
ಸಿನಿಮಾದ ಬ್ರೀಫಿಂಗ್ ಕೊಡುವಾಗಲೇ ಚಿತ್ರದ ಮ್ಯೂಸಿಕ್ ಮಾಸ್ ಆಗಿರಲಿ ಎಂದಿದ್ದರು. ಎಕ್ಸ್‍ಪೆರಿಮೆಂಟ್ ಚಿತ್ರಗಳಿಗೆ ಮ್ಯೂಸಿಕ್ ಕೊಟ್ಟಿದ್ದ ನನಗೆ ಇದು ಹೊಸದು. ಪ್ರತಿಯೊಂದರಲ್ಲೂ ಮಾಸ್ ಫೀಲ್ ಕೊಡೋದು ಎಕ್ಸ್‍ಪೆರಿಮೆಂಟ್ ಚಿತ್ರಗಳ ಮ್ಯೂಸಿಕ್ಕಿಗಿಂತಾ ಕಷ್ಟ ಅನ್ನೋದು ಕಾರ್ತಿಕ್ ಶರ್ಮಾ ಮಾತು.
ಚಿತ್ರದ ಹಾಡಿನಲ್ಲಿ ಗುನುಗುವ ಮ್ಯಾಜಿಕ್, ಎದೆತಟ್ಟುವ ಲಾಜಿಕ್ಕು.. ಎಲ್ಲವೂ ಇದೆ. ಪಟೇಲ್ ಶ್ರೀನಿವಾಸ್ ಮತ್ತು ಸುರೇಖಾ ರಾಮ್ ಪ್ರಸಾದ್ ನಿರ್ಮಾಣದ ಚಿತ್ರ ಇದೇ ಗಣೇಶ ಹಬ್ಬಕ್ಕೆ ಥಿಯೇಟರಿಗೆ ಬರುತ್ತಿದೆ.