ವಿಕ್ರಾಂತ್ ರೋಣ ಚಿತ್ರದ ಒಂದಿಷ್ಟು ತುಣುಕುಗಳನ್ನು ತೋರಿಸಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ. ನೋಡಿದ ಪ್ರತಿಯೊಬ್ಬರಿಗೂ ವ್ಹಾವ್ ಎನ್ನಿಸುವಂತಿದೆ. ನಿರ್ಮಾಪಕ ಜಾಕ್ ಮಂಜು ಅವರು ಮಾಡಿರುವ ವೆಚ್ಚ ಕಣ್ಣಿಗೆ ಕಾಣುತ್ತಿದೆ. ಸುದೀಪ್ ಹುಟ್ಟುಹಬ್ಬಕ್ಕೆಂದೇ ಬಿಡುಗಡೆಯಾದ ವಿಕ್ರಾಂತ್ ರೋಣ ಚಿತ್ರದ ತುಣುಕುಗಳು, ಮೇಕಿಂಗ್ ಕ್ವಾಲಿಟಿ ಅದ್ಭುತವಾಗಿದೆ. ಅನೂಪ್ ಭಂಡಾರಿ ರಿಲೀಸ್ ಮಾಡಿರುವುದು ಡೆಡ್ ಮ್ಯಾನ್ ಆಂಥಮ್‍ನ ಟೀಸರ್‍ನ್ನು ಮಾತ್ರ.
ಟೀಸರ್ ವಿಷ್ಯುಯಲಿ ರಿಚ್ ಆಗಿದೆ. ಒಂದೊಂದು ಫ್ರೇಮ್‍ನಲ್ಲೂ ಡೈರೆಕ್ಟರ್ ಹಾಕಿರುವ ಶ್ರಮ ಗೋಚರವಾಗುತ್ತಿದೆ. ಐದೂ ಭಾಷೆಗಳಲ್ಲಿ ತಯಾರಾಗುತ್ತಿರುವ ವಿಕ್ರಾಂತ್ ರೋಣ ರಿಲೀಸ್ ಆಗುವುದೇನಿದ್ದರೂ ಕೋಟಿಗೊಬ್ಬ 3 ನಂತರವೇ. ಸ್ವತಃ ಸುದೀಪ್ ಇದನ್ನು ಹೇಳಿರೋದ್ರಿಂದ ಈ ಚಿತ್ರವನ್ನು ಕೂಡಾ 2022ಕ್ಕೆ ಕಾಯ್ದಿರಿಸಬೇಕು.