ಲಂಕೆ ಚಿತ್ರ ಅಧಿಕೃತವಾಗಿ ರಿಲೀಸ್ ಡೇಟ್ ಘೋಷಿಸಿಕೊಂಡು ಚಿತ್ರಮಂದಿರಕ್ಕೆ ಲಗ್ಗೆಯಿಡುತ್ತಿದೆ. ಗೌರಿ ಗಣೇಶ ಹಬ್ಬಕ್ಕೆ ರಿಲೀಸ್ ಆಗುತ್ತಿರುವ ಏಕೈಕ ಸ್ಟಾರ್ ಸಿನಿಮಾ ಲಂಕೆ. ವಿಶೇಷವೆಂದರೆ ಈ ಚಿತ್ರದಲ್ಲಿ ವಿಲನ್ ಆಗಿರುವುದು ಸಪೂರ ಸುಂದರಿ ಕಾವ್ಯಾ ಶೆಟ್ಟಿ.
ನೆಗೆಟಿವ್ ಶೇಡ್ ಇರೋ ಪಾತ್ರದಲ್ಲಿ ನಟಿಸಿರೋದು ನನಗೂ ಇದು ಮೊದಲ ಅನುಭವ. ಚಿತ್ರದಲ್ಲಿ ಬೇರೆ ಬೇರೆ ಪಾತ್ರಗಳಿದ್ದರೂ, ನಿರ್ದೇಶಕರು ನನಗೇ ಈ ಪಾತ್ರ ಕೊಟ್ಟರು. ಯೋಗಿ ಮತ್ತು ಕೃಷಿ ತಾಪಂಡ ಜೊತೆ ಒಂದು ಫೈಟ್ ಕೂಡಾ ಇದೆ. ಸಿಂಪಲ್ ಆಗಿ ಹೇಳ್ಬೇಕಂದ್ರೆ ಈ ಚಿತ್ರದಲ್ಲಿ ನನ್ನದು ರಾವಣನ ರೋಲ್. ಯೋಗಿ ರಾಮ ಎಂದಿದ್ದಾರೆ ಕಾವ್ಯಾ ಶೆಟ್ಟಿ.
ರಾಮ್ ಪ್ರಸಾದ್ ನಿರ್ದೇಶನದ ಚಿತ್ರದಲ್ಲಿ ಒಟ್ಟು ನಾಲ್ವರು ನಾಯಕಿಯರಿದ್ದಾರೆ. ಸಂಚಾರಿ ವಿಜಯ್ ಕೂಡಾ ನಟಿಸಿದ್ದಾರೆ. ಈಗಾಗಲೇ ಲಂಕೆಯಲ್ಲಿ ನಟಿಸಿರುವಂತಹ ಪಾತ್ರದ ಮಾದರಿಗಳೇ ಹುಡುಕಿ ಬರುತ್ತಿವೆ. ಆದರೆ, ಲಂಕೆಗೆ ಜನರ ರೆಸ್ಪಾನ್ಸ್ ಹೇಗಿರುತ್ತೆ ನೋಡಿಕೊಂಡು ಅವುಗಳನ್ನು ಓಕೆ ಮಾಡುತ್ತೇನೆ ಎಂದಿದ್ದಾರೆ ಕಾವ್ಯಾ ಶೆಟ್ಟಿ.