ಇತ್ತೀಚೆಗೆ ಕನ್ನಡ ಚಿತ್ರರಂಗದ ಸ್ಟಾರ್ ನಿರ್ಮಾಪಕ, ಉದ್ಯಮಿ ಉಮಾಪತಿ ಶ್ರೀನಿವಾಸ್ ಅವರಿಗೆ ಭೂಗತ ಪಾತಕಿಗಳಿಂದ ಬೆದರಿಕೆ ಕರೆಗಳು ಬಂದಿದ್ದವು. ಹಾಗೆ ಕರೆ ಮಾಡಿದ್ದವರಲ್ಲಿ ದ.ಆಫ್ರಿಕಾದಲ್ಲಿದ್ದ ಪಾತಕಿ ಬಾಂಬೆ ರವಿಯೂ ಒಬ್ಬ. ಆತ ಇತ್ತೀಚೆಗೆ ಆಫ್ರಿಕಾದಲ್ಲಿಯೇ ಕೊರೊನಾ ಬಂದು ಮೃತಪಟ್ಟಿದ್ದಾನೆ. ಆದರೆ, ಸಾಯುವ ಮೊದಲು ಬಾಂಬೆ ರವಿ ಉಮಾಪತಿ ಶ್ರೀನಿವಾಸ್ ಅವರಿಗೆ ಫೋನ್ ಮಾಡಿ, ಕ್ಷಮೆ ಕೇಳಿದ್ದನಂತೆ.
ಆತ ನನಗೆ ಕರೆ ಮಾಡಿದ್ದ. ಯಾರದ್ದೋ ಮಾತು ಕೇಳಿ ತಪ್ಪು ಮಾಡಿಬಿಟ್ಟೆ. ನೀವು ಮನೆಗೆ ಹೋಗಿ ಸ್ಪೀಕರ್ ಆನ್ ಮಾಡಿ. ನಿಮ್ಮ ತಾಯಿ, ಪತ್ನಿಯ ಎದುರು ಫೋನ್ ಮಾಡಿ ಅವರ ಎದುರೇ ಕ್ಷಮೆ ಕೇಳುತ್ತೇನೆ ಎಂದು ಕೇಳಿಕೊಂಡಿದ್ದ ಎಂದು ಹೇಳಿದ್ದಾರೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್.
ಇತ್ತೀಚೆಗೆ ನಡೆದ ದರ್ಶನ್ ಜೊತೆಗಿನ ವಿವಾದದಲ್ಲಿಯೂ ಅವನಿಗೆ ಫೋನ್ ಮಾಡಿದ್ದರಂತೆ. ಉಮಾಪತಿಯವರಿಗೆ ಬೆದರಿಸೋಕೆ ಕೇಳಿದ್ದರಂತೆ. ಅದನ್ನೂ ಕೂಡಾ ಸ್ವತಃ ಉಮಾಪತಿ ಶ್ರೀನಿವಾಸ್ ಅವರೇ ಬಹಿರಂಗಪಡಿಸಿದ್ದಾರೆ.