ಇತ್ತೀಚೆಗೆ ಲಹರಿ ಸಂಸ್ಥೆ ಕನ್ನಡದ ದೊಡ್ಡ ದೊಡ್ಡ ಚಿತ್ರಗಳನ್ನೆಲ್ಲ ತೆಕ್ಕೆಗೆ ಹಾಕಿಕೊಳ್ಳುತ್ತಿದೆ. ಕೆಜಿಎಫ್ ಚಾಪ್ಟರ್ 2, ಆರ್‍ಆರ್‍ಆರ್ ಚಿತ್ರಗಳ ಆಡಿಯೋ ರೈಟ್ಸ್ ಖರೀದಿಸಿದ್ದ ಲಹರಿ ಸಂಸ್ಥೆ ಈಗ ವಿಕ್ರಾಂತ್ ರೋಣ ಚಿತ್ರದ ಆಡಿಯೋ ಹಕ್ಕುಗಳನ್ನೂ ಖರೀದಿಸಿದೆ. ಅಲ್ಲಿಗೆ.. ಇನ್ನೊಂದು ಪ್ಯಾನ್ ಇಂಡಿಯಾ ಸಿನಿಮಾ ಲಹರಿ ತೆಕ್ಕೆಗೆ ಜಾರಿದೆ.
ಹಾಗೆ ಆಡಿಯೋ ರೈಟ್ಸ್ ಖರೀದಿಸಿದ ಹಿಂದೆಯೇ ಸುದೀಪ್ ಬರ್ತ್ ಡೇ ಕೂಡಾ ಬಂದಿದೆ. ಸೆಪ್ಟೆಂಬರ್ 2ಕ್ಕೆ ಸುದೀಪ್ ಹುಟ್ಟುಹಬ್ಬ. ಅಭಿಮಾನಿಗಳ ಸೈನ್ಯವನ್ನು ಸುದೀಪ್ ಅಭಿಮಾನದಿಂದಲೇ ಕಟ್ಟಿಹಾಕಿದ್ದಾರೆ. ಅದ್ಧೂರಿತನಕ್ಕೆ ಬ್ರೇಕ್ ಹಾಕಿದ್ದಾರೆ. ಆದರೆ.. ಆ ದಿನ ವಿಕ್ರಾಂತ್ ರೋಣ ಚಿತ್ರತಂಡ ಹಬ್ಬವನ್ನಂತೂ ಮಾಡಲಿದೆ. ಸೆ.2ರಂದು ವಿಕ್ರಾಂತ್ ರೋಣ ಚಿತ್ರದ ಡೆತ್ ಮ್ಯಾನ್ ಆ್ಯಂಥಮ್ ಸಾಂಗ್ ರಿಲೀಸ್ ಆಗಲಿದೆ. ವಾಟ್ ಈಸ್ ದಿಸ್ ಎನ್ನುವಂತಿಲ್ಲ. ಡೈರೆಕ್ಟರ್ ಅನೂಪ್ ಭಂಡಾರಿ ಅವರಂತೂ ಈ ಬಾರಿ ಡಿಫರೆಂಟ್ ಗಿಫ್ಟ್‍ನ್ನು ಈ ಹಾಡಿನ ಮೂಲಕ ರೆಡಿ ಮಾಡಿಟ್ಟುಕೊಂಡಿದ್ದಾರೆ.