ಕೊರೊನಾ ಬರದೇ ಹೋಗಿದ್ದರೆ.. ಲಾಕ್ ಡೌನ್, ವೀಕೆಂಡ್ ಕಫ್ರ್ಯೂ, ನೈಟ್ ಕಫ್ರ್ಯೂ.. ಇವೆಲ್ಲ ಇಲ್ಲದೇ ಇದ್ದಿದ್ದರೆ.. ಇಷ್ಟು ಹೊತ್ತಿಗೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ಮೈಲುಗಲ್ಲು ನಡೆಬೇಕಿತ್ತು ಕೆಜಿಎಫ್ ಚಾಪ್ಟರ್ 2. 2021ರ ಜುಲೈ 16ರಂದು ರಿಲೀಸ್ ಆಗಬೇಕಿದ್ದ ಚಿತ್ರವಿದು. ಕೊರೊನಾ ಕಾರಣಗಳಿಂದಾಗಿ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಅದೂ 2022ಕ್ಕೆ.
2022, ಏಪ್ರಿಲ್ 14. ಕೆಜಿಎಫ್ ಚಾಪ್ಟರ್ 2 ರಿಲೀಸ್ ಡೇಟ್. ಯಶ್, ಸಂಜಯ್ ದತ್, ಪ್ರಕಾಶ್ ರೈ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ.. ನಟಿಸಿರುವ ಚಿತ್ರಕ್ಕೆ ಕನಸು ಮತ್ತು ಕಸುವು ತಂಬಿರುವುದು ನಿರ್ದೇಶಕ ಪ್ರಶಾಂತ್ ನೀಲ್. ಹೊಂಬಾಳೆ ಫಿಲಮ್ಸ್‍ನ ಭಾರೀ ನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ 2. 2022ರವರೆಗೆ ಕಾಯದೆ ವಿಧಿಯಿಲ್ಲ.