` 10 ವರ್ಷದ ನಂತರ ತಮಿಳಿಗೆ ಹರಿಪ್ರಿಯಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
10 ವರ್ಷದ ನಂತರ ತಮಿಳಿಗೆ ಹರಿಪ್ರಿಯಾ
Haripriya Image

ಇತ್ತೀಚೆಗೆ ಕನ್ನಡದಲ್ಲಿಯೇ ವೆರೈಟಿ ವೆರೈಟಿ ಪಾತ್ರ, ಸಿನಿಮಾಗಳಲ್ಲಿ ಬ್ಯುಸಿ ಯಾಗಿರುವ ಹರಿಪ್ರಿಯಾ, ಈಗ ತಮಿಳಿಗೆ ಹೋಗುತ್ತಿದ್ದಾರೆ. ತಮಿಳು ಚಿತ್ರರಂಗ ಹರಿಪ್ರಿಯಾಗೆ ಹೊಸದೇನಲ್ಲ. ತೆಲುಗು, ಮಲಯಾಳಂ ಚಿತ್ರರಂಗಗಳೂ ಹೊಸದಲ್ಲ. ಆದರೆ, 2011ರ ನಂತರ ಕನ್ನಡದಲ್ಲಿಯೇ ನೆಲೆಯೂರಿದ್ದ ಹರಿಪ್ರಿಯಾ ಈಗ ಮತ್ತೊಮ್ಮೆ ತಮಿಳಿಗೆ ಹೋಗುತ್ತಿದ್ದಾರೆ.

ಸತ್ಯಸಿವ ನಿರ್ದೇಶನದ ಶಶಿಕುಮಾರ್ ಹೀರೋ ಆಗಿರುವ ತಮಿಳು ಚಿತ್ರದಲ್ಲೀಗ ಹರಿಪ್ರಿಯಾ ಹೀರೋಯಿನ್. ನನಗೆ ಆರಂಭದಲ್ಲಿ ನಟನೆಗೆ ಅವಕಾಶ ಇರುವ ಪಾತ್ರಗಳು ಸಿಕ್ಕಿದ್ದು ತಮಿಳು ಮತ್ತು ಮಲಯಾಳಂನಲ್ಲಿ. ಅಲ್ಲಿಯ ನಟನೆ ನೋಡಿಯೇ ಕನ್ನಡದವರು ಸ್ಕೋಪ್ ಇರುವ ಪಾತ್ರಗಳನ್ನು ನನಗೆ ಕೊಟ್ಟರು.  ಒಳ್ಳೊಳ್ಳೆ ಪಾತ್ರಗಳು ಸಿಕ್ಕವು. ಈಗ ಮತ್ತೊಮ್ಮೆ ತಮಿಳಿನಿಂದ ಕರೆ ಬಂದಿದೆ. 20ದಿನ ಶೂಟಿಂಗ್. ಪಾತ್ರವೂ ಚೆನ್ನಾಗಿದೆ ಎಂದಿದ್ದಾರೆ ಹರಿಪ್ರಿಯಾ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery