` ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಫಿಲ್ಮ್ ಚೇಂಬರ್ ಕಟ್ಟುನಿಟ್ಟಿನ ರೂಲ್ಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಫಿಲ್ಮ್ ಚೇಂಬರ್ ಕಟ್ಟುನಿಟ್ಟಿನ ರೂಲ್ಸ್
ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಫಿಲ್ಮ್ ಚೇಂಬರ್ ಕಟ್ಟುನಿಟ್ಟಿನ ರೂಲ್ಸ್

ಇತ್ತೀಚೆಗೆ ಲವ್ ಯೂ ರಚ್ಚು ಚಿತ್ರದ ಚಿತ್ರೀಕರಣ ವೇಳೆ ಸಂಭವಿಸಿದ ಅನಾಹುತದಲ್ಲಿ ಫೈಟರ್ ವಿವೇಕ್ ಮೃತಪಟ್ಟಿದ್ದರು. ಇಂತಹ ದುರಂತಗಳು ಪದೇ ಪದೇ ಆಗುತ್ತಿರುವ ಹಿನ್ನೆಲೆಯಲ್ಲಿ ಫಿಲ್ಮ್ ಚೇಂಬರ್ ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಿದೆ.

ಸಾಹಸ ದೃಶ್ಯಗಳ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಇನ್ಷೂರೆನ್ಸ್ ಮಾಡಿಸಿರಬೇಕು. ಇನ್ಷೂರೆನ್ಸ್ ಇರುವ ಕಾರ್ಮಿಕರು, ತಂತ್ರಜ್ಞರನ್ನಷ್ಟೇ ಚಿತ್ರೀಕರಣದಲ್ಲಿ ಬಳಸಿಕೊಳ್ಳಬೇಕು. ತಂಡದವರಿಗೆ ಗ್ರೂಪ್ ಇನ್ಷೂರೆನ್ಸ್ ಮಾಡಿಸುವ ಹೊಣೆಗಾರಿಕೆ ನಿರ್ಮಾಪಕರದ್ದು. ಸಾಹಸ ದೃಶ್ಯಗಳ ಶೂಟಿಂಗ್ ಸಮಯದಲ್ಲಿ ಆಂಬುಲೆನ್ಸ್, ಡಾಕ್ಟರ್ಸ್, ನರ್ಸ್, ಫಸ್ಟ್ ಏಡ್ ವ್ಯವಸ್ಥೆ ಸೇರಿದಂತೆ ಎಲ್ಲವನ್ನೂ ಸಜ್ಜಾಗಿಟ್ಟಿರಬೇಕು. ಇದು ಫಿಲ್ಮ್ ಚೇಂಬರ್ ರೂಪಿಸಿರುವ ನಿಯಮ.

ಫಿಲ್ಮ್ ಚೇಂಬರ್ ಪದಾಧಿಕಾರಿಗಳು, ಕಾರ್ಮಿಕರ ಸಂಘ, ನಿರ್ಮಾಪಕರ ಸಂಘ ಹಾಗೂ ಫೈಟರ್ಸ್ ಅಸೋಸಿಯೇಷನ್‍ನವರು ಒಟ್ಟಿಗೇ ಸಭೆ ನಡೆಸಿ, ಸುದ್ದಿಗೋಷ್ಟಿ ಮಾಡಿ ಇಷ್ಟೆಲ್ಲ ವಿವರವನ್ನೂ ನೀಡಿದ್ದಾರೆ. ಹಾಗಂತ.. ಇವುಗೆಳೆಲ್ಲ ಹೊಸ ನಿಯಮಗಳೇನೂ ಅಲ್ಲ.  ಈ ಸಭೆಗೂ ಮುನ್ನ ಇದ್ದಂತಹ ನಿಯಮಗಳೇ. ಯಾರೂ ಫಾಲೋ ಮಾಡುತ್ತಿರಲಿಲ್ಲ ಅಷ್ಟೆ.. ಇನ್ನು ಮುಂದೆ ಫಾಲೋ ಮಾಡ್ತಾರಾ.. ವೇಯ್ಟ್ ಮಾಡಿ ನೋಡಬೇಕು.