ಕನ್ನಡದಲ್ಲಿ ಸದ್ಯಕ್ಕೆ ಭಾರೀ ಬಜೆಟ್ ಚಿತ್ರದ ಲಿಸ್ಟಿನಲ್ಲಿರೋದು ಕೆಜಿಎಫ್ ಚಿತ್ರವೇ. ಅಷ್ಟು ಅದ್ಧೂರಿತನವಿದ್ದರೂ ಕೆಜಿಎಫ್‍ನ ಮೇಕಿಂಗ್ 100 ಕೋಟಿಯನ್ನೇನೂ ದಾಟಿಲ್ಲ. ಆದರೀಗ 500 ಕೋಟಿ ಬಜೆಟ್‍ನ ಸಿನಿಮಾ ಘೋಷಿಸಿದ್ದಾರೆ ಉದ್ಯಮಿ ಉದ್ಯಮಿ ಗಾನ ಶರವಣ ಸ್ವಾಮಿ.
ಕನ್ನಡದಲ್ಲಿ 500 ಕೋಟಿ ಬಜೆಟ್‍ನಲ್ಲಿ ತಯಾರಾಗುವ ಈ ಚಿತ್ರಕ್ಕೆ 640 ಕೋಟಿಯ ಸೆಟ್ ಹಾಕ್ತಾರಂತೆ. ಚಿತ್ರ ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ, ಇಂಗ್ಲಿಷ್ ಭಾಷೆಯಲ್ಲೂ ಬರಲಿದೆಯಂತೆ. ಚಿತ್ರಕ್ಕೆ ಟೈಟಲ್ ಕೂಡಾ ಫಿಕ್ಸ್ ಆಗಿದೆ. ಕ್ರಿಷ್ಣರಾಜ-4.
ಯಾರಿದು ಗಾನ ಶರವಣ ಸ್ವಾಮಿ ಅನ್ನೋ ಕುತೂಹಲವೇ? ಇವರು ಭಗವತಿ ದೇವಿಯ ಆರಾಧಕರು. ಚಿನ್ನದ ಉದ್ಯಮಿ. ದೊಡ್ಡಬಳ್ಳಾಪುರದವರು. ಗಾಯಕರೂ ಹೌದು. ಮೈಸೂರಿನಲ್ಲಿ ಫಿಲ್ಮ್ ಸಿಟಿಯನ್ನೂ ಮಾಡಲು ಹೊರಟಿರುವ ಇವರು, ಅದಕ್ಕಾಗಿ 640 ಎಕರೆ ಜಾಗವನ್ನೂ ಖರೀದಿಸಿದ್ದಾರೆ. ಇತ್ತೀಚೆಗೆ ಇವರು ಕೇರಳದ ಭಗವತಿ ದೇವಿಗೆ 526 ಕೋಟಿ ಕಾಣಿಕೆ ನೀಡಿ ದೇಶಾದ್ಯಂತ ಸುದ್ದಿಯಾಗಿದ್ದರು.