ಕನ್ನಡದ ಸ್ಟಾರ್ ನಿರ್ಮಾಪಕರಲ್ಲಿ ಒಬ್ಬರಾಗಿರುವ ಉಮಾಪತಿ ಶ್ರೀನಿವಾಸ್ ಗೌಡ, ಸ್ವತಃ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಬೆಂಗಳೂರು-ಕನಕಪುರ ರಸ್ತೆಯಲ್ಲಿ ಸುಮಾರು 25 ಎಕರೆ ಭೂಮಿಯಲ್ಲಿ ಫಿಲ್ಮ್ ಸಿಟಿ ನಿರ್ಮಿಸಲು ಮುಂದಾಗಿದ್ದಾರೆ ಉಮಾಪತಿ ಶ್ರೀನಿವಾಸ್ ಗೌಡ. ಸದ್ಯಕ್ಕೆ ಫಿಲ್ಮ್ ಸಿಟಿ ಬಜೆಟ್ 175 ಕೋಟಿ.
ಹೆಬ್ಬುಲಿ, ರಾಬರ್ಟ್, ಮದಗಜ ಚಿತ್ರಗಳ ನಿರ್ಮಾಪಕರಾಗಿರುವ ಉಮಾಪತಿ, ಹಂತ ಹಂತವಾಗಿ ಕೆಲಸಗಳನ್ನು ಆರಂಭಿಸಲಿದ್ದಾರೆ. ಮುಂದಿನ ವರ್ಷದಿಂದಲೇ ಫಿಲ್ಮ್ ಸಿಟಿಯನ್ನು ಚಿತ್ರೀಕರಣಕ್ಕೆ ಓಪನ್ ಮಾಡುವುದಾಗಿ ಹೇಳಿದ್ದಾರೆ. ಆಧುನಿಕ ತಂತ್ರಜ್ಞಾನ, ಸ್ಟುಡಿಯೋ ಸೇರಿದಂತೆ ಎಲ್ಲವೂ ಇರುವ ಫಿಲ್ಮ್ ಸಿಟಿಗೆ ಸದ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.