` ಡಾಲಿ-ಡಿಂಪಲ್ ಮಾನ್ಸೂನ್ ರಾಗ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಡಾಲಿ-ಡಿಂಪಲ್ ಮಾನ್ಸೂನ್ ರಾಗ
Mansore Raaga

ಡಾಲಿ ಧನಂಜಯ್ ಮತ್ತು ಡಿಂಪಲ್ ರಚಿತಾ ಇಬ್ಬರೂ ಮತ್ತೊಮ್ಮೆ ಒಂದಾಗಿದ್ದಾರೆ. ಅದೂ ಮಾನ್ಸೂನ್ ರಾಗದಲ್ಲಿ. ಇಬ್ಬರನ್ನೂ ಒಟ್ಟಿಗೆ ಸೇರಿಸಿರುವುದು ಪುಷ್ಪಕವಿಮಾನ ಖ್ಯಾತಿಯ ವಿಖ್ಯಾತ್.

ಇದೊಂದು ಮಾಸ್ ಮತ್ತು ಕ್ಲಾಸ್ ಸಿನಿಮಾ. ಪೀರಿಯಾಡಿಕಲ್ ಮೂವಿಯೂ ಹೌದು. ಧನಂಜಯ್ ಅವರದ್ದು ಪುದುವೈನಲ್ಲಿ ಧನುಷ್ ರೋಲ್ ಮಾದರಿಯಲ್ಲಿ ಇದೆಯಂತೆ. ರಚಿತಾ ರಾಮ್ ಅವರದ್ದು ಕಲ್ಟ್ ರೋಲ್. ಒಂದು ರೀತಿಯಲ್ಲಿ ಅಮೃತವರ್ಷಿಣಿ ಚಿತ್ರಕ್ಕೆ ಮಸಾಲೆ ಬೆರೆಸಿದ ಮಾದರಿಯ ಸ್ಟೋರಿ ಎಂದಿದ್ದಾರೆ ವಿಖ್ಯಾತ್.

ಪುಷ್ಪಕವಿಮಾನ ನಿರ್ದೇಶಿಸಿದ್ದ ರವೀಂದ್ರನಾಥ್, ಈ ಚಿತ್ರಕ್ಕೆ ಮತ್ತೊಮ್ಮೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಟೀಸರ್ ಕೂಡಾ ವ್ಹಾವ್ ಎನ್ನುವಂತಿದೆ. ಶೀಘ್ರದಲ್ಲೇ ಸಿನಿಮಾ ಶೂಟಿಂಗ್ ಕೂಡಾ ಶುರುವಾಗಲಿದೆ.