ಕೆಜಿಎಫ್ ಚಾಪ್ಟರ್ 2. ಇಡೀ ಇಂಡಿಯಾದಲ್ಲಿ ಪ್ರೇಕ್ಷಕರು ನೋಡಲು ಕಾತರಿಸುತ್ತಿರುವ ಸಿನಿಮಾ. ಯಶ್, ಪ್ರಶಾಂತ್ ನೀಲ್, ಹೊಂಬಾಳೆ ಕಾಂಬಿನೇಷನ್ನಿನ ಸಿನಿಮಾದ 2ನೇ ಚಾಪ್ಟರ್‍ನಲ್ಲಿ ಸಂಜಯ್ ದತ್, ರವೀನಾ ಟಂಡನ್ ಕೂಡಾ ಜೊತೆಯಾಗಿದ್ದಾರೆ. ಚಾಪ್ಟರ್ 1, ಬಾಕ್ಸಾಫೀಸ್ ಚಿಂದಿ ಉಡಿಆಯಿಸಿತ್ತು. ಹೀಗಾಗಿಯೇ ಚಾಪ್ಟರ್ 2 ಮೇಲೆ ಭಯಂಕರ ನಿರೀಕ್ಷೆಯಿದೆ. ಈ ಸಿನಿಮಾ ಈಗ ಥಿಯೇಟರಿಗೇ ಬರಲ್ವಾ? ಅಂತಾದ್ದೊಂದು ಸುದ್ದಿ ಈಗ ಇಂಗ್ಲಿಷ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ.
ಇಂಗ್ಲಿಷ್ ಮೀಡಿಯಾಗಳ ಪ್ರಕಾರ ಕೆಜಿಎಫ್ ಚಾಪ್ಟರ್ 2, ಒಟಿಟಿ ಪ್ಲಾಟ್‍ಫಾರ್ಮ್‍ಗಳು 255 ಕೋಟಿ ಆಫರ್ ಕೊಟ್ಟಿವೆ. ಥಿಯೇಟರಿಗೆ ರಿಲೀಸ್ ಮಾಡದೆ, ಡೈರೆಕ್ಟ್ ಆಗಿ ಒಟಿಟಿಯಲ್ಲೇ ರಿಲೀಸ್ ಮಾಡಿದರೆ 255 ಕೋಟಿ. ಮತ್ತೂ ಒಂದು ಆಫರ್ ಇದೆ. ಸಿನಿಮಾ ರಿಲೀಸ್ ಮಾಡಿ. ಆದರೆ, ಕೇವಲ 2 ವಾರದ ನಂತರ ಒಟಿಟಿಗೂ ಕೊಡಿ ಅನ್ನೋದು. ತಮಿಳಿನಲ್ಲಿ ವಿಜಯ್ ಮತ್ತು ವಿಜಯ್ ಸೇತುಪತಿ ನಟಿಸಿದ್ದ ಮಾಸ್ಟರ್ ಚಿತ್ರವನ್ನು ಇದೇ ಮಾಡೆಲ್‍ನಲ್ಲಿ ಖರೀದಿಸಿತ್ತು ಅಮೇಜಾನ್ ಪ್ರೈಮ್. ಈಗ ಕೆಜಿಎಫ್‍ಗೂ ಅದೇ ಆಫರ್ ಮುಂದಿಟ್ಟಿದೆಯಂತೆ.
ಇದು ನಿಜಾನಾ..? ಸುಳ್ಳಾ..?
ನೋ ವೇ..ಚಾನ್ಸೇ ಇಲ್ಲ ಎನ್ನುತ್ತಿದೆ ಹೊಂಬಾಳೆ ಟೀಂ. ಆ ಚಿತ್ರವನ್ನು ಥಿಯೇಟರಿನಲ್ಲೇ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಅವರಿಗೆ ನಿರಾಸೆ ಮಾಡುವುದಿಲ್ಲ. ಥಿಯೇಟರಿನಲ್ಲಿ ರಿಲೀಸ್ ಹಬ್ಬ ಮುಗಿದ ನಂತರವಷ್ಟೇ ಒಟಿಟಿಗೆ ಎಂದಿದೆ.