ಸದ್ಯಕ್ಕೆ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರ ಭರ್ತಿಗೆ ಅವಕಾಶವಿದೆ. ಆದರೆ, 50% ಪ್ರೇಕ್ಷಕರಿಗಷ್ಟೇ ಅವಕಾಶ ಇರುವ ಕಾರಣ ದೊಡ್ಡ ದೊಡ್ಡ ಚಿತ್ರಗಳು ರಿಲೀಸ್ ಆಗುತ್ತಿಲ್ಲ. ಈ ವಾರ ರಿಲೀಸ್ ಆದ ಕಲಿವೀರ ಚಿತ್ರಕ್ಕೆ ಪರವಾಗಿಲ್ಲ ಎನ್ನುವ ರೆಸ್ಪಾನ್ಸ್ ಇದ್ದರೂ, ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಚಿತ್ರಮಂದಿರಗಳ ಕಡೆ ತಲೆ ಹಾಕುತ್ತಿಲ್ಲ. ಅದು ಆಗಬೇಕೆಂದರೆ ದೊಡ್ಡ ಚಿತ್ರಗಳು ರಿಲೀಸ್ ಆಗಬೇಕು.
50% ಭರ್ತಿಗಷ್ಟೇ ಅವಕಾಶ ಇರೋದ್ರಿಂದ ಹೊಸ ಸಿನಿಮಾ ರಿಲೀಸ್ ಆಗುತ್ತಿಲ್ಲ. ದಯವಿಟ್ಟು 100% ಅವಕಾಶ ಕೊಡಿ ಎಂದು ಶಿವಣ್ಣ ನೇತೃತ್ವದ ಚಿತ್ರರಂಗದ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದೆ. ಶಿವರಾಜ್ ಕುಮಾರ್ ನೇತೃತ್ವದಲ್ಲಿ ಚೇಂಜಬರ್ ಅಧ್ಯಕ್ಷ ಜೈರಾಜ್, ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ಎನ್‍ಎಂ ಸುರೇಶ್, ಉಮೇಶ್ ಬಣಕಾರ್, ನಾಗಣ್ಣ, ಕೆ.ಮಂಜು, ಶಾಸಕಿ ತಾರಾ ಅನುರಾಧಾ ಬೊಮ್ಮಾಯಿ ಅವರ ಬಳಿಗೆ ತೆರಳಿದ ನಿಯೋಗದಲ್ಲಿದ್ದರು.
ತಜ್ಞರ ಸಮಿತಿ ವರದಿ ನೋಡಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ತಜ್ಞರ ಸಮಿತಿ ಶಿಫಾರಸಿನ ಆಧಾರದಲ್ಲೇ ಕ್ರಮ ಎಂದಿದ್ದಾರೆ ಸಿಎಂ ಬೊಮ್ಮಾಯಿ. ಈ ಮಾತು ಕೇಳಿದರೆ, ಬಹುತೇಕ 2021ರಲ್ಲಿ ಸಿನಿಮಾ ಮಂದಿರಗಳಿಗೆ 100% ಅವಕಾಶ ಸಿಗುವ ಸಾಧ್ಯತೆ ಇಲ್ಲ.